Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಇಂದ ಪುಡ್ ಪ್ರಿಯರಿಗೆ ಗುಡ್ ನ್ಯೂಸ್

ಬಿಬಿಎಂಪಿ ಇಂದ ಪುಡ್ ಪ್ರಿಯರಿಗೆ ಗುಡ್ ನ್ಯೂಸ್
bangalore , ಸೋಮವಾರ, 18 ಜುಲೈ 2022 (17:26 IST)
ನಾಳೆಯಿಂದ ನಿಮ್ಮ ಮನೆಗೆ ಡಿಲೇವರಿ ಆಗುತ್ತೆ ಬೀದಿ ಬದಿಯ ಸ್ವೇಷಲ್ ಪುಡ್.ಹೈ ಫೈ ಹೊಟೇಲ್ ಗುಣಮಟ್ಟದಂತೆ ನಿಮಗೆ ತಲುಪುತ್ತೆ ಆಹಾರ.ವಿನೂತನ ಪ್ರಯೋಗಕ್ಕೆ ಈಗ  ಬಿಬಿಎಂಪಿ ಮುಂದಾಗಿದ್ದು,ಬೀದಿ ಬದಿ ಆಹಾರ  ಮಾರಟಗಾರರ ವಹಿವಾಟು ಹೆಚ್ಚಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.ಆನ್ ಲೈನ್ ನಲ್ಲಿ ಬೀದಿ ಬದಿ ಆಹಾರ  ಮಾರಟಕ್ಕೆ ಬಿಬಿಎಂಪಿ  ವೇದಿಕೆ ಕಲ್ಪಿಸಿದೆ.ಪ್ರತಿಷ್ಟಿತ ಸ್ವಿಗ್ಗಿ,ಜೊಮೇಟೊ ದಂತಹ ಆನ್ ಲೈನ್ ಡಿಲವರಿ ಆ್ಯಫ್ ಗಳ ಜೊತೆ ಒಪ್ಪಂದಕ್ಕೆ ಮಾಡಿಕೊಳ್ಳಲು ಸಿದ್ದತೆ ಕೂಡ ನಡೆಸಿದೆ.ಗುಣಮಟ್ಟದ ಆಹಾರ ಪೊರೈಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಮುಂದಾಗಿದ್ದು ,ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೆ-ನಲ್‌ಮ್‌)ಅಡಿಯಲ್ಲಿ  ತರಬೇತಿ  ನೀಡಲು ಸಿದ್ಧತೆ ನಡೆಸಿದೆ.ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಬಿಬಿಎಂಪಿ ಅಧಿಕಾರಿಗಳಿಂದ ಆಗಸ್ಟ್ 15 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ಕೂಡ ನೀಡಿದ್ದಾರೆ.ಅದಕ್ಕಾಗಿ ನಗರದಲ್ಲಿ ಬೀದಿ ಆಹಾರ ಮಾರಟಗಾರರ ಬಳಿ ಬಿಬಿಎಂಪಿ ಮಾಹಿತಿ ಕಲೆ ಹಾಕಿದೆ.
 
ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರಿರುವ ಕುರಿತಂತೆ ಅಂದಾಜು ನಡೆಸಿದೆ.ಇದಕ್ಕಾಗಿ ಬಿಬಿಎಂಪಿಯಿಂದ ಬೀದಿ ಮಾರಟಗಾರರಿಗೆ ಸೀಗುವ ಸವಲತ್ತು, ಮಾರಾಟ ವಿಸ್ತರಿಸಲು ಅವಕಾಶ ನೀಡುವುದು. ಸೇರಿದಂತೆ ಬಿಬಿಎಂಪಿಯಿಂದ ಸಾಲವನ್ನೂ ಕೊಡಿಸುವುದು ಹೀಗೆ ನಾನಾ ಪ್ಲ್ಯಾನ್ ಬಿಬಿಎಂಪಿ ಮಾಡಿಕೊಂಡಿದೆ . ಇನ್ನು ಪಾಲಿಕೆ  ನಿಗದಿ ಮಾಡಿದ ಬ್ಯಾಂಕ್‌ಗಳಿಂದ 2 ಲಕ್ಷದವರಗೆ ಸಾಲ ನೀಡಲಾಗ್ತದೆ.ಆಹಾರ ಸರಬರಾಜು ಆ್ಯಫ್ ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕೂಡ ಬಿಬಿಎಂಪಿ   ಸಹಕಾರ ನೀಡುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜಪೇಟೆಯಲ್ಲಿ ಈಗ ಮತ್ತೊಂದು ವಿವಾದದ ಹೊಗೆ