Publish Date: Sat, 12 Oct 2019 (15:33 IST)
Updated Date: Sat, 12 Oct 2019 (15:36 IST)
ಚಿನ್ನಾಭರಣ ಮಾಡಿಸಿ ಬಹಳ ವರ್ಷಗಳಾಗಿವೆ, ಕೆಲವು ಹಾಳಾಗುತ್ತಿವೆ ಅಂತ ಯೋಚಿಸೋ ಜನರಿಗಾಗಿ ಜ್ಯುವೆಲರಿ ಶೋ ಒಳ್ಳೆಯ ಅವಕಾಶ ನೀಡುತ್ತಿದೆ.
ದೇಶದ 30 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿರುವ "ದ ಜ್ಯುವೆಲರಿ ಷೋ" ಪ್ರದರ್ಶನ ಮತ್ತು ಮಾರಾಟದ ಉತ್ಸವಕ್ಕೆ ನಟಿ ಆಶಿಕಾ ರಂಗನಾಥ್ ಚಾಲನೆ ನೀಡಿದ್ರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಡೆನಿಸನ್ ಹೋಟೆಲ್ನಲ್ಲಿ ಅ.12, 13 ಹಾಗೂ 14 ರಂದು ನಡೆಯಲಿರುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
ಹೆಸರಾಂತ ಆಭರಣ ಮಳಿಗೆಗಳು ಇರುವ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ಚಿನ್ನದ ಆಭರಣಗಳು ಹಾಲ್ ಮಾರ್ಕ್ ಹೊಂದಿವೆ. ವಜ್ರಾಭರಣಗಳು ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಪ್ರಮಾಣೀಕೃತ ಹೊಂದಿವೆ. ಅಲ್ಲದೇ ಖರೀದಿದಾರರು ತಮ್ಮ ಹಳೆ ಚಿನ್ನದ ಆಭರಣಗಳನ್ನು ಬದಲಾಯಿಸಿಕೊಳ್ಳಬಹುದು.