Publish Date: Fri, 02 Aug 2019 (13:04 IST)
Updated Date: Fri, 02 Aug 2019 (13:06 IST)
ಮನೆ ಮಂದಿ ಮಲಗಿದ್ದಾಗ ಬೆಡ್ ರೂಂನಲ್ಲಿ ಆಗಬಾರದ ಘಟನೆ ಆಗಿ ಹೋಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರ ತಾಲ್ಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಮನೆ ಕಳ್ಳತನ ನಡೆದಿದೆ.
ಮನೆಯಲ್ಲಿದ್ದ ಟ್ರೇಜರಿ ಒಡೆದು ಚಿನ್ನ, ಹಣ ದೊಚಿಕೊಂಡು ಕಳ್ಳರು ಪರಾರಿಯಾಗಿದ್ದರೆ.
ಸುಭಾಸ ಗೌಡ ಪಾಟೀಲ ಎಂಬ ಮಾಲೀಕನ ಅಂಗಡಿಯಲ್ಲಿ ಇದ್ದ ಹಣ ಹಾಗೂ ಮನೆಯಲ್ಲಿದ್ದ ಎರಡು ತೊಲೆ ಚಿನ್ನವನ್ನು ಕಳ್ಳತನ ಮಾಡಿದ್ದಾರೆ.
ಈ ಕುರಿತು ಕಿತ್ತೂರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.