Select Your Language

Notifications

webdunia
webdunia
webdunia
webdunia

ಕಣ್ಮನ ಸೆಳೆದ ಪುಟಾಣಿಗಳ ಬಳಕು ನಡಿಗೆ

ಕಣ್ಮನ ಸೆಳೆದ ಪುಟಾಣಿಗಳ ಬಳಕು ನಡಿಗೆ
bangalore , ಬುಧವಾರ, 1 ಸೆಪ್ಟಂಬರ್ 2021 (19:55 IST)
ಕೊರೋನಾದಿಂದ ಸ್ತಬ್ಧವಾಗಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸುತ್ತಿದ್ದೆ. ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ರೂಪದರ್ಶಿಯರು ಹೆಜ್ಜೆ ಹಾಕುವ ಮೂಲಕ ಎಲ್ಲರ ಕಣ್ಮನ ತಣಿಸಿದರು.
 
ನಗರದ ದಿ ಸಂಭ್ರಮ್ ರೂಕ್ ರೆಸಾರ್ಟ್ನಲ್ಲಿ ನಡೆದ ಮಿಸ್ಟರ್, ಮಿಸ್, ಮಿಸೆಸ್, ಲಿಟಲ್ ಪ್ರಿನ್ಸ್, ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ -2021 ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು.
 
ಮಿಸ್ಟರ್ ಇಂಡಿಯಾ ಕಿರೀಟ ಅಕ್ಷಿತ್ ಪಾಲಿಗೆ ಒಲಿದರೆ, ಮಿಸ್ ಇಂಡಿಯಾ ಕಿರೀಟ ಶ್ರಾವ್ಯ ಪಡೆದರು. ಇನ್ನೂ ಮಿಸ್ ಟೀನ್ ಇಂಡಿಯಾ ವಿಭಾಗದಲ್ಲಿ ಪ್ರೀಯಾ, ಮಿಸ್ಟರ್ ಟೀನ್ ಇಂಡಿಯಾ ವಿಭಾಗದಲ್ಲಿ ಯಶವಂತ್ ಬಲ್ಲಾಳ್ ವಿಜೇಯರಾದರು.
 
ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಗೆ ಬಂದ ಮಕ್ಕಳು ಸಂಗೀತದ ನಾದಕ್ಕೆ ತಕ್ಕಂತೆ ಬಳುಕುವ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಮನ ಖುಷಿಗೊಳಿಸಿದರು. ವೆಸ್ಟರ್ನ್ ಸುತ್ತಿನಲ್ಲಿ ಮಾದಕ ನಡೆಯ ಮೂಲಕ ರ್ಯಾಂಪ್ ಮೇಲೆ ಬಂದ ತರುಣ ತರುಣಿಯರು ವಿಭಿನ್ನ ಉಡುಗೆಗಳಿಂದ ಫ್ಯಾಷನ್ ಶೋ ಮೆರುಗು ಹೆಚ್ಚಿಸಿದರು. 
 
ಮದುವೆಯಾದ ಮೇಲೆ ಫ್ಯಾಷನ್ ಲೋಕ ನಮಗಲ್ಲ ಎಂದು ತಿಳಿದ ಎಷ್ಟೋ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ರೂಪದಲ್ಲಿ ವೇದಿಕೆ ಮೇಲೆ ಬಂದ ಮಹಿಳೆಯರಿಗೆ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಮೆಚ್ಚುಗೆ ಸೂಚಿಸಿದರು.
 
ಬಿಹಾರ, ತಮಿಳುನಾಡು, ಆಂಧ್ರಪ್ರದೇಶ.. ಹೀಗೆ ವಿವಿಧ ರಾಜ್ಯಗಳ ಸುಮಾರು 75 ಸ್ಪರ್ಧಿಗಳು ರ್ಯಾಂಪ್ ಮೇಲೆ ವಾಕ್ ಮಾಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಫ್ಯಾಷನ್ ಲೋಕದ ತಾರೆಯರ ಪ್ರಶ್ನೆಗಳಿಗೆ ಚೂರು ತಡವರಿಸದೆ ಎಲ್ಲರೂ ಆತ್ಮವಿಶ್ವಾಸದಿಂದ ಉತ್ತರಿಸಿದ್ದು ಸಹ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು.
 
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯ ಶ್ರಮಹಾಕಿದ ಆಯೋಜಕ ಯಶ್, 'ಇಲ್ಲಿ ಗೆದ್ದರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ಮುಂದಿನ ಹಂತ ನಡೆಯಲಿದ್ದು, ಅಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಅಲ್ಲಿ ವಿಜೇತರಾದವರು ಮುಂದಿನ ಹಂತದಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ'ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಹಾಗೂ ರೂಪದರ್ಶಿ ಶುಭ ರಕ್ಷಾ, 'ಎಲ್ಲಾ ವರ್ಗದವರೂ ಭಾಗವಹಿಸುವಂತಹ ಅವಕಾಶ ಈ ಶೋ ನಲ್ಲಿ ನೀಡಲಾಗಿದೆ. ಮದುವೆಯಾದವರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವೇದಿಕೆ ಸಹಾಯವಾಗಲಿದೆ. ಸಾಕಷ್ಟು ಜನರ ಬದುಕಿಗೆ ಭರವಸೆಯನ್ನು ಮೂಡಿಸಲಿದೆ' ಎಂದು ಹೇಳಿದರು. 
 
ವಿಜೇತರಾದವರಿಗೆ ಆಯೋಜಕ ಯಶ್ ಹಾಗೂ ಅತಿಥಿಗಳು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂತೋಷ್ ರೆಡ್ಡಿ, ಸೀಮಾ, ಶ್ವೇತ ನಿರಂಜನ್ ಇದ್ದರು. 
 
ನ್ಯೂನ್ಯತೆ ಮರೆತು ಆತ್ಮವಿಶ್ವಸದ ಹೆಜ್ಜೆ ಹಾಕಿದ ರೂಪಿಣಿ
 
ಯಶ್ ಇಂಟರ್ನ್ಯಾಷನಲ್ ಫ್ಯಾಷನ್ ವೀಕ್ ಅರ್ಪಿಸುವ ಮಿಸ್ಟರ್, ಮಿಸೆಸ್, ಮಿಸ್, ಲಿಟಲ್ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ 2021 ಕಾರ್ಯಕ್ರಮ ಸ್ಪರ್ಧಿಗಳ ಭಿನ್ನತೆಯಿಂದಲೇ ಕಳೆಗಟ್ಟಿತ್ತು. ವಿಶೇಷ ಏನಪ್ಪಾ ಎಂದರೆ, ಕಿವಿ ಕೇಳದ 25 ವರ್ಷದ ರೂಪಿಣಿ ದೈಹಿಕ ನ್ಯೂನ್ಯತೆಯನ್ನು ಮೀರಿ ತನ್ನ ಕನಸುಗಳನ್ನು ಇಡೇರಿಸಿಕೊಳ್ಳಲು ಬೆಗರು ಕಂಗಳಲ್ಲಿ ಹೆಜ್ಜೆಹಾಕಿ ಎಲ್ಲರ ಮನಸೆಳೆದರು. ತೀರ್ಪುಗಾರರ ಬಾಯಿಯ ಚಲನವಲನವನ್ನೇ ಗಮನಿಸಿ ಅವರ ಪ್ರಶ್ನೆಗಳಿಗೆ ಪಟ ಪಟ  ಅಂತ ಉತ್ತರಿಸಿದರು.
show

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶ: ಶಂಕಿತ ಡೆಂಘ್ಯೂಗೆ 40 ಮಕ್ಕಳು ಬಲಿ