Select Your Language

Notifications

webdunia
webdunia
webdunia
webdunia

ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರನ್ನು ಟಾರ್ಗೆಟ್ ಮಾಡುತಿದ್ದ ಖತರ್ನಾಕ್ ಜೋಡಿ

ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರನ್ನು ಟಾರ್ಗೆಟ್ ಮಾಡುತಿದ್ದ ಖತರ್ನಾಕ್ ಜೋಡಿ
bangalore , ಮಂಗಳವಾರ, 31 ಆಗಸ್ಟ್ 2021 (20:12 IST)
ಬೆಂಗಳೂರು: ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರನ್ನು ಟಾರ್ಗೇಟ್ ಮಾಡುತ್ತಿದ್ದ ಕಳ್ಳ ಜೋಡಿಯಲ್ಲಿ ಒಬ್ಬಳನ್ನು  ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 20 ಲಕ್ಷ ರೂ ಮೌಲ್ಯದ 439 ಗ್ರಾಂ ಚಿನ್ನಾಭರಣ ವಶಕ್ಕೆ  ಪಡೆದಿದ್ದಾರೆ. ಬಾಯ್ ಫ್ರೆಂಡ್ ಕಂ ಸಹಚರ ಎಸ್ಕೇಪ್ ಆಗಿದ್ದಾನೆ.
 
ಪ್ರಕರಣ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದು ನಗರದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುತ್ತಿದ್ದ  ಯಾತ್ರಾರ್ಥಿಗಳ ಬ್ಯಾಗ್ ಗಳನ್ನೇ ಎಗರಿಸುತ್ತಿದ್ದ ಅಂದ್ರ ಮೂಲದ ಖತರ್ನಾಕ್ ಲೇಡಿ ಮಮತಾ(28) ಮತ್ತು ಈಕೆಯ ಗೆಳೆಯ ದೇವರ ದರ್ಶನ ಪಡೆದು ಪುನೀತರಾಗಬೇಕು ಎನ್ನುವವರ ಬೆಲೆಬಾಳುವ ಕಾಣಿಕೆಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ಯಾತ್ರೆಗೆ ತೆರಳುವ ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಜೋಡಿ ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಚಿಕ್ಕ ಅಥವಾ  ವ್ಯಾನಿಟಿ  ಬ್ಯಾಗ್ ಗಳನ್ನು ಟವೆಲ್ ನಲ್ಲಿ ಸುತ್ತಿಕೊಂಡು ಎಸ್ಕೇಪ್ ಆಗುತ್ತಿದ್ದರು. ಲೇಡಿಯ ಗಂಡ ಕೆಲ ವರ್ಷಗಳ ಹಿಂದೆ ಸವನೊಪ್ಪಿದ್ದು ಗೆಳೆಯನ ಜೊತೆ ಅಕ್ರಮ ಸಂಭಂದದಲ್ಲಿ ಇದ್ದಳು ಎಂದು ಪೊಲೀಸರು ಹೇಳಿದ್ದಾರೆ.     
 
 
ಅಡವಿಡಲು ಬಂದಾಗ ಅಂದರ್:   
 
ಕುಕ್ಕೆಯಲ್ಲಿ ಕದ್ದಿದ್ದ ಚಿನ್ನಾಭರಣವನ್ನು ಚಿನ್ನದ ಅಂಗಡಿಯಲ್ಲಿ ಅಡವಿಡಲು ಬೆಂಗಳೂರಿಗೆ ಆಗಮಿಸಿದಾಗ ಕಳ್ಳ ಜೋಡಿಗಳಾದ ಮಮತಾ ಮತ್ತು ಮಹದೇವ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದವರನ್ನು ಹಿಡಿದು ಯಶವಂತಪುರ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಕುಕ್ಕೆಯ ಯಾತ್ರಾರ್ಥಿಗಳ ಚಿನ್ನಾಭರಣ ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
 
ಕುಕ್ಕೆಯಲ್ಲಿ ಒಂದು ಪ್ರಕರಣ: 
 
ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಈಗಾಗಲೇ 1  ಪ್ರಕರಣ ದಾಖಲಾಗಿತ್ತು. ಇದೀಗ ಉತ್ತರ ವಿಭಾಗದ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡ್ಡಿದ್ದು ಸಹಚರನನ್ನು ಬಂಧಿಸಲು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯಚೂರು ಮೂಲದ ರಾಜ್ಯ ಸರ್ಕಾರಿ ನೌಕರನ ಶವ ನಗರದ ಲಾಡ್ಜ್ ನಲ್ಲಿ ಪತ್ತೆ