Select Your Language

Notifications

webdunia
webdunia
webdunia
webdunia

ರಾಜ್ಯಗಳಿಗೆ ಆಕ್ರಮವಾಗಿ ಲಾರಿಯಲ್ಲಿ ಗಾಂಜಾ ಮಾರಾಟ

ರಾಜ್ಯಗಳಿಗೆ ಆಕ್ರಮವಾಗಿ ಲಾರಿಯಲ್ಲಿ ಗಾಂಜಾ ಮಾರಾಟ
bangalore , ಭಾನುವಾರ, 29 ಆಗಸ್ಟ್ 2021 (19:41 IST)
ಬೆಂಗಳೂರು: 
 
ಹೈದರಾಬಾದ್ ಮೂಲಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಕ್ರಮವಾಗಿ ಲಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಹೈಟೆಕ್ ಗಾಂಜಾ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಅಂತಾರಾಜ್ಯ ಆರೋಪಿಗಳನ್ನು ಎನ್‌ಸಿಬಿ(ಮಾದಕವಸ್ತು ನಿಯಂತ್ರಣ ದಳ) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
 
ಮಹಾರಾಷ್ಟ್ರದ ಲಾತೂರ್ ಮೂಲದ ಶಿಂಧೆ, ಕಾಂಬ್ಲೆ ಹಾಗೂ ಜೋಗ್ದಂದ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 21 ಕೋಟಿ ರೂ. ಮೌಲ್ಯದ 3,400 ಕೆ.ಜಿ ಹೈಟೆಕ್ ಗಾಂಜಾ ಹಾಗೂ ಲಾರಿಯನ್ನು ವಶಕ್ಕೆೆ ಪಡೆಯಲಾಗಿದೆ.
ಕಳೆದ ಜೂನ್‌ನಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ, 15 ಕೋಟಿ ರೂ. ಮೌಲ್ಯದ 2 ಸಾವಿರ ಕೆ.ಜಿ. ತೂಕದ ಗಾಂಜಾ ವಶಕ್ಕೆ ಪಡೆದು, ಮಹಾರಾಷ್ಟ್ರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಇದೀಗ 21 ಕೋಟಿ ರೂ. ಮೌಲ್ಯದ 3,400 ಕೆ.ಜಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿರುವುದು ಎನ್‌ಸಿಬಿ ಇತಿಹಾಸದಲ್ಲಿ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ.
 
ಆರೋಪಿಗಳು, ಮಹಾರಾಷ್ಟ್ರ ಮಾತ್ರವಲ್ಲದೆ, ಓಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾಾನ ಸೇರಿದಂತೆ ಶ್ರೀಲಂಕಾಕ್ಕೂ ಅಕ್ರಮವಾಗಿ ಗಾಂಜಾ ಸರಬರಾಜು ಮಾರಾಟ ಮಾಡುತ್ತಿದ್ದರು. ವಿವಿಧ ರಾಜ್ಯಗಳಲ್ಲಿ ನಡೆಯುವ ಪಾರ್ಟಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
 
ಆರೋಪಿಗಳಿಂದ ಸುಳಿವು:
ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಚಟುವಟಿಕೆ ಹೆಚ್ಚಳವಾದ ಹಿನ್ನೆೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಈ ಹಿಂದೆ ಮಾದಕ ವಸ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ತನಿಖೆ ಚುರುಕುಗೊಳಿಸಿದ್ದರು. ಅದರಂತೆ, ಖಚಿತ ಮಾಹಿತಿ ಮೇರೆಗೆ ಹೈದರಾಬಾದ್ ಹೊರವರ್ತುಲದಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
 
ಸಸಿಗಳ ಬುಡದಲ್ಲಿನ ಮಣ್ಣಿನಲ್ಲಿ ಗಾಂಜಾ:
ಆರೋಪಿಗಳು, ಯಾರಿಗೂ ಅನುಮಾನ ಬಾರದಿರಲು ಸಸಿಗಳ ಬುಡದಲ್ಲಿನ ಮಣ್ಣಿನ ಜೊತೆ ಪ್ಲಾಸ್ಟಿಕ್‌ನಿಂದ ಗಾಂಜಾ ಸುತ್ತಿಿ ಮಣ್ಣು ಮುಚ್ಚಿದ್ದರು. ಅಲ್ಲದೆ, 141 ಗೋಣಿಚೀಲದಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಇಟ್ಟು ಅದರೊಳಗೆ ಮಣ್ಣು ತುಂಬಿದ್ದರು. ಹೀಗೆ, ವಶಪಡಿಸಿಕೊಂಡಿರುವ ಲಾರಿಯು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಆರೋಪಿಗಳು, ಪುಣೆ, ಥಾಣೆ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಗೆ ಹಾಡಹಗಲೇ ಕಿರುಕುಳ