Webdunia - Bharat's app for daily news and videos

Install App

ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಕಟ್ಟಿಂಗ್, ಶೇವಿಂಗ್ ಫ್ರೀ...!!

Webdunia
ಬುಧವಾರ, 27 ಜುಲೈ 2022 (17:20 IST)
ತಿಂಗಳ ಹಿಂದೆ ಕೋಲಾರದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮ ನಡೆದಾಗ ಮಾಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ತಮ್ಮ ಪೆಟ್ರೋಲ್ ಬಂಕ್ನಲ್ಲಿ ಒಂದೊಂದು ಗಾಡಿಗೆ ಇನ್ನೂರು ರೂಪಾಯಿಯ ಪೆಟ್ರೋಲ್ ಹಾಕಿಸಿದ್ದರು.
 
ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಅಕ್ಕಿ ಮೂಟೆ ಹಾಗೂ ಸೀರೆ ನೀಡಿದ್ದರು. ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರ ಅಭಿಮಾನಿಯೊಬ್ಬರು ಮತದಾರರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಇಲ್ಲಿ ನಾಯಕನ ಪರವಾಗಿ ಅಭಿಮಾನಿಯೇ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ.
 
ಕೋಲಾರದ ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಕಟ್ಟಿಂಗ್, ಶೇವಿಂಗ್ ಫ್ರೀಯಾಗಿ ಮಾಡುವ ಅಂಗಡಿಯೊಂದು ಗಮನ ಸೆಳೆದಿದೆ. ಕೋಲಾರ ಜಿಲ್ಲೆ ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್ ಎಂದು ಇಲ್ಲೊಬ್ಬ ಬಾರ್ಬರ್ ಶಾಪ್ ಮಾಲೀಕ ಹೀಗೊಂದು ಆಫರ್ ಘೋಷಣೆ ಮಾಡಿದ್ದಾರೆ. ಹೌದು ಮಾಲೂರು ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗನೊರ್ವ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರಿಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್ ಎಂದು ಅನೌನ್ಸ್ ಮಾಡಿದ್ದಾರೆ.
 
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿರುವ ಈ ಬಾರ್ಬರ್ ಶಾಪ್‌ನಲ್ಲಿ ಜೆಡಿಎಸ್ ಹಾಗೂ ಅವರ ಬೆಂಬಲಿಗರಿಗೆ ಉಚಿತ ಕಟ್ಟಿಂಗ್ ಅನ್ನೋ ಘೋಷಣೆ ಶುರುವಾಗಿದ್ದು, ಇದೊಂದು ರೀತಿಯ ವಿಚಿತ್ರ ಕ್ಯಾಂಪೇನ್ ಎನ್ನಲಾಗಿದೆ. ಮಾಜಿ ಸೈನಿಕರು, ವೃದ್ಧರು, ಜೆಡಿಎಸ್‌ಗೆ ವೋಟ್ ಹಾಕುವವರಿಗೆ ಉಚಿತ ಕ್ಷೌರಿಕ ಕೆಲಸ ಮಾಡಲು ಇಲ್ಲೊಬ್ಬ ಮುಂದಾಗಿರುವುದು ನಿಜಕ್ಕೂ ಸಖತ್ ವೈರಲ್ ಆಗಿದೆ. ಕುಡಿಯನೂರು ಗ್ರಾಮದ ಸವಿತ ಸಮಾಜದ ರಾಜೇಶ್ ಎಂಬುವವರಿಗೆ ಉಚಿತವಾಗಿ ಅಂಗಡಿ ಮಾಡಿಕೊಟ್ಟ ಜೆಡಿಎಸ್ ಮುಖಂಡನೊರ್ವ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅಂಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಮೇಗೌಡ ಭಾವ ಚಿತ್ರ ಹಾಕಿದ್ದು, ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆಗಳನ್ನ ಉಲ್ಲೇಖ ಮಾಡಿ ಜೆಡಿಎಸ್ ಅಭಿಮಾನ ಮೆರೆದಿದ್ದಾರೆ. ಇನ್ನೂ ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡುವುದು ಸೇರಿದಂತೆ ತನಗಿರುವ ಪಕ್ಷದ ಅಭಿಮಾನವನ್ನ ಹೀಗೆ ತನ್ನ ವೃತ್ತಿಯಲ್ಲೂ ತೋರಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments