Publish Date: Wed, 27 Jul 2022 (15:48 IST)
Updated Date: Wed, 27 Jul 2022 (15:55 IST)
ಗೋಮಾಂಸವನ್ನು ನಾವು ಇಂದು ತಿನ್ನಲ್ಲ. ನಾಳೆಯಿಂದ ತಿನ್ನುತ್ತೇವೆ, ಏನ್ ಮಾಡ್ತೀರೋ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಅಲ್ಪಸಂಖ್ಯಾತ ವಿಭಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟಿಪ್ಪು ಜಯಂತಿ ಬ್ಯಾನ್ ಮಾಡಿ ಎಂದಾಗ ಬಿಜೆಪಿಯವರ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನ್ ಮಾಡ್ತೀರಾ ಮಾಡಿಕೊಳ್ಳಿ ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಮ್ಮ ಸಿದ್ದರಾಮಯ್ಯ ಆಚರಿಸಿದರು. ಸಿದ್ದರಾಮಯ್ಯ ಏಕ್ ಶೇರ್ ಹೈ. (ಸಿದ್ದರಾಮಯ್ಯ ಒಂದು ಸಿಂಹ ಇದ್ದಂತೆ). ಹೀಗಾಗಿ ನಮಾಜ್ ಬಳಿಕ ಸಿದ್ದರಾಮಯ್ಯನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ, ಮುಸ್ಲಿಮರು ತಲೆ ತಗ್ಗಿಸಿ ನಡೆಯಬಾರದು. ತಲೆ ಎತ್ತಿ ನಡೆಯಬೇಕೆಂದು ಕರೆ ನೀಡಿದರು.