Publish Date: Wed, 27 Jul 2022 (14:55 IST)
Updated Date: Wed, 27 Jul 2022 (15:57 IST)
ಮದುವೆಗಳೆಂದರೆ ಅಲ್ಲಿ ವರ ಕುದುರೆಯೇರಿ ಬರುವುದು ಸಾಮಾನ್ಯ. ಅದೇ ರೀತಿ ನಡೆಯುತ್ತಿದ್ದ ಮದುವೆ ಮೆರವಣಿಗೆಯಲ್ಲಿ ಕುದುರೆ ಓಡಿ ಹೋಗಿ, ಆರು ಮಂದಿಗೆ ಗಾಯ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಮೀರ್‌ಪುರದಲ್ಲಿ ಸೋಮವಾರ ಮದುವೆ ಮೆರವಣಿಗೆಯೊಂದು ನಡೆಯುತ್ತಿತ್ತು.
ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಜತೆಯೇ ಕುದುರೆಯಿತ್ತು. ಕುಣಿತದ ಜೋಶ್‌ನಲ್ಲಿ ಡಿಜೆ ಸದ್ದನ್ನು ಹೆಚ್ಚಿಸಲಾಗಿದ್ದು, ಕುದುರೆ ಒಮ್ಮೆಲೆ ಗಾಬರಿಗೊಂಡಿದೆ.
ಒಮ್ಮೆ ಹಾರಿ, ಅಲ್ಲಿಂದ ಜಾಗ ಕಿತ್ತಿದೆ. ಅದು ಓಡುವ ರಭಸಕ್ಕೆ ಅಲ್ಲಿದ್ದ 6 ಮಂದಿ ಗಾಯಗೊಂಡಿದ್ದಾರೆ. ಅಲ್ಲೇ ಹತ್ತಿರದಲ್ಲಿದ್ದ ಬೈಕ್‌ಗಳನ್ನೂ ಬೀಳಿಸಿ ಕುದುರೆ ಓಡಿದೆ