ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆಯ ನಾಟಕವಾಡುತ್ತಿದ್ದಾರೆ .ಮೊದಲ ಬಾರಿ ಸಿಎಂ ಆಗಿದ್ದಾಗಲೇ ವರದಿ ಬಿಡುಗಡೆ ಮಾಡಬಹುದಿತ್ತು, ಆದರೆ ಮಾಡಲಿಲ್ಲ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು ಆವಾಗಲೇ ಸರ್ವೆ ಮಾಡದ ಸಿದ್ರಾಮಯ್ಯ ಈಗ ಮತ್ತೆ ಜಾತಿಗಣತಿ ವರದಿ ಬಿಡುಗಡೆ ಮಾಡ್ತಿವಿ ಅಂತಾ ನಾಟಕ ಮಾಡ್ತಿದ್ದಾರೆಂದು ಮೈಸೂರಿನಲ್ಲಿ ಈಶ್ವರಪ್ಪ ಕಿಡಿಕಾರಿದ್ದಾರೆ.
ಆಪರೇಷನ್ ಕಮಲ ವೇಳೆ ದುಡ್ಡು ಪಡೆದ ಆರೋಪದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಿಶ್ವನಾಥ್ ನನ್ನ ಆತ್ಮೀಯ ಸ್ನೇಹಿತ ಆದ್ರೆ ವಿಶ್ವನಾಥ್ ತಾವೊಬ್ಬರೇ ಸತ್ಯ ಹರಿಶ್ಚಂದ್ರ ಅನ್ಕೋಂಡಿದ್ದಾರೆ. ಹಣ ಪಡೆದವರು ಯಾರು, ಎಷ್ಟು? ಎಲ್ಲಿ ಹೇಳಲಿ ಅಂತಾ ಈಶ್ಚರಪ್ಪ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.