Publish Date: Sat, 21 Oct 2023 (17:43 IST)
Updated Date: Sat, 21 Oct 2023 (17:46 IST)
ಲೋಕಸಭೆ ಚುನಾವಣೆ ವೇಳೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಬಂದರೂ ಅಚ್ಚರಿಯಿಲ್ಲ.ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ವಿಚಾರ ಮಾಡುತ್ತೇವೆ ಅಂತಾ ಸಚಿವ ಎಂಬಿ ಪಾಟೀಲ್ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಬಹಳ ಮೇಧಾವಿಗಳು. ಅವರ ಹೇಳಿಕೆಗೆ ನಾನು ಉತ್ತರ ಕೊಡಲು ಬಯಸಲ್ಲ. ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಹೌದು ಸೇರಿದ್ದಾರೆ, ಈಶ್ವರಪ್ಪ ಬಂದರೂ ಅಚ್ಚರಿಯಿಲ್ಲ ಎಂದರು.