ಬೆಂಗಳೂರು: ಡಯಾಬಿಟೀಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ನವೆಂಬರ್ 14 ರಿಂದ 20 ರವರೆಗೆ "ಕಾವೇರಿ ಬೆಂಗಳೂರು ರನ್" ಶೀರ್ಷಿಕೆಯ “ವರ್ಚುವಲ್ ಮ್ಯಾರಥಾನ್”ನನ್ನು ಕಾವೇರಿ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದೆ.
ಈ ವರ್ಚುವಲ್ ಮ್ಯಾರಥಾನ್ ಕುರಿತು ಮಾಹಿತಿ ನೀಡಿರುವ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಜಯ ಭಾಸ್ಕರನ್, ಅಧ್ಯಯನವೊಂದರ ಪ್ರಕಾರ, ನಗರ ಪ್ರದೇಶಗಳಲ್ಲಿ 11.2 ಪ್ರತಿಶತದಷ್ಟು ಜನರು ಮಧುಮೇಹಿಗಳಿದ್ದಾರೆ. ಹೀಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅದರಲ್ಲೂ ಡಯಾಬಿಟೀಸ್ ಬಗ್ಗೆ ಜನರು ಜಾಗೃತಿ ಹೊಂದಿರುವುದು ಅತ್ಯವಶ್ಯಕ. ಈ ದೃಷ್ಟಿಯಿಂದ ಜನಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ. ಕೋವಿಡ್ ಸಾಂಕ್ರಮಿಕದ ಕಾರಣ ಈ ಮ್ಯಾರಥಾನ್‌ನನ್ನು ವರ್ಚುವಲ್ ಮೂಲಕ ನಡೆಸಲಾಗುತ್ತಿದೆ ಎಂದರು.
ಕಾವೇರಿ ಆಸ್ಪತ್ರೆ ನಿರ್ದೇಶಕ ವಿಲ್ಫ್ರೆಡ್ ಸ್ಯಾಮ್ಸನ್ ಮಾತನಾಡಿ, ನ. 14ರಿಂದ ಒಂದು ವಾರಗಳ ಕಾಲ ಈ ವರ್ಚುವಲ್ ಮ್ಯಾರಥಾನ್ ನಡೆಯಲಿದೆ. ಆಸಕ್ತರು http://www.kauverybangalorerun.com ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಕೊಳ್ಳಬಹುದು. ಈ ಮ್ಯಾರಥಾನ್ ನಾಲ್ಕು ವಿಭಾಗದಲ್ಲಿ ನಡೆಸಲಾಗುತ್ತಿದೆ. 21.1k., 1k, 10k, 5k ಹಾಗೂ 2k ವಿಭಾಗದಲ್ಲಿ ಓಟ ಇರಲಿದೆ. ಪ್ರತಿ ವಿಭಾಗದಲ್ಲಿ ಗೆದ್ದ ಮೂವರಿಗೆ ಪ್ರಶಸ್ತಿ ನೀಡಲಾಗುವುದು. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಪದಕವನ್ನು ವಿತರಿಸಲಾಗುತ್ತದೆ. ಭಾಗವಹಿಸಲು ಇಚ್ಚಿಸುವವರು ಸಮಯ ಹಾಗೂ ಕಿ.ಮೀನನ್ನು ಟ್ರ್ಯಾಕ್ ಮಾಡುವ ಟ್ರ್ಯಾಕಿಂಗ್ ಅಪ್ಲಿಕೇಷನ್‌ನನ್ನು ಡೌಲ್‌ಲೋಡ್ ಮಾಡಿಕೊಳ್ಳಬೇಕು.
ನೀವು ಯಾವ ವಿಭಾಗದ ಓಟದಲ್ಲಿ ಪಾಲ್ಗೊಂಡಿದ್ದೀರಿ ಎಂದು ಕಿ.ಮೀ ಹಾಗೂ ಫೋಟೋವನ್ನು http://www.kauverybangalorerun.com ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದು. ವಿಜೇತರಿಗೆ ಕಾವೇರಿ ಆಸ್ಪತ್ರೆ ತಂಡವರು ಕರೆ ಮಾಡಿ ಪ್ರಶಸ್ತಿ ವಿತರಿಸಲಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಪವನ್ ಕುಮಾರ್: ಮೊ: 9535238141 | ಇಮೇಲ್:
[email protected] ಅಥವಾ www.kauverybangalorerun.com ಗೆ ಭೇಟಿ ನೀಡಿ