Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಹರಿಶ್ಚಂದ್ರರಾಗಿ ಇವತ್ತು ಉಳಿದಿಲ್ಲ ಎಂದ ಬಿಜೆಪಿ ಶಾಸಕ

ಬಿಜೆಪಿಯವರು ಹರಿಶ್ಚಂದ್ರರಾಗಿ ಇವತ್ತು ಉಳಿದಿಲ್ಲ ಎಂದ ಬಿಜೆಪಿ ಶಾಸಕ
ಬೆಂಗಳೂರು , ಮಂಗಳವಾರ, 13 ಏಪ್ರಿಲ್ 2021 (12:05 IST)
ಬೆಂಗಳೂರು : ಬಿಜೆಪಿ ಪಕ್ಷ ಹಾಗೂ ನಾಯಕರ ಕುರಿತು ಬಿಜೆಪಿ ಸಂಸ್ಥಾಪನಾ ದಿನಾಚರಣೆಯಂದು  ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ಬಾಗಲಕೋಟೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಸಲಾಗಿತ್ತು. ಅಂದು ಮಾತನಾಡಿದ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿಯವರು ಹರಿಶ್ಚಂದ್ರರಾಗಿ ಇವತ್ತು ಉಳಿದಿಲ್ಲ. ಇದು ಎಲ್ಲರೂ ಒಪ್ಪಿಕೊಳ್ಳುವಂತಹದು ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಹಾಗೇ ಇರಬೇಕು, ಹೀಗೆ ಇರಬೇಕು ಎಂದು ಹೇಳುತ್ತಾರೆ.  ಅವರ ಆದರ್ಶ ಇವರ ಆದರ್ಶ ಅವೆಲ್ಲವೂ ಈಗ ಹೋಗಿದೆ, ಎಲ್ಲರಂತೆ ನಾವು ಆಗಿದ್ದೇವೆ. ಕಾಂಗ್ರೆಸ್ ನವರಿಗಿಂತ ಸ್ವಲ್ಪ ಉತ್ತಮ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ- ಸಿಎಂ ಬಿಎಸ್ ವೈ