Select Your Language

Notifications

webdunia
webdunia
webdunia
webdunia

ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ- ಸಿಎಂ ಬಿಎಸ್ ವೈ

ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ- ಸಿಎಂ ಬಿಎಸ್ ವೈ
ಬೆಂಗಳೂರು , ಮಂಗಳವಾರ, 13 ಏಪ್ರಿಲ್ 2021 (10:03 IST)
ಬೆಂಗಳೂರು : ಇಂದು ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಾಡಿನ ಸಮಸ್ತ ಜನರಿಗೆ ಸಿಎಂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ಬಳಿಕ ನೌಕರರ ಮುಷ್ಕರದ ಬಗ್ಗೆ ಬಸವ ಕಲ್ಯಾಣದಲ್ಲಿ ಸುದ್ದಿಗಾರೊಂದಿಗೆ  ಮಾತನಾಡಿದ ಅವರು,  ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ.  ಹಬ್ಬಹರಿದಿನಗಳಲ್ಲಿ ಈ ರೀತಿ ಮಾಡೋದು ಸರಿಯಿಲ್ಲ. ಹಠವನ್ನು ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ಕೊಡಲ್ಲ ಎಂದು ಹೇಳಿದ್ದಾರೆ.

ಸದ್ಯಕ್ಕೆ ಲಾಕ್ ಡೌನ್ ಇಲ್ಲ. ಏ.18, 19ಕ್ಕೆ ಸರ್ವಪಕ್ಷದ ಸಭೆ ಕರೆದಿದ್ದೇನೆ. ಸಭೆಯಲ್ಲಿ ಸಲಹೆ ಪಡೆದು ಮುಂದಿನ ತೀರ್ಮಾನ ಕೊರೊನಾ ತಡೆಗೆ ಜನರು ಸಹಕರಿಸಬೇಕು. ಜನರು ಕೊರೊನಾ ಮರೆತರೆ ಅನಾಹುತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ ಕಿರಾಣಿ ಅಂಗಡಿಯಾತ