Viral video: ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆಯ ನಡು ರಸ್ತೆಯಲ್ಲೇ ಎಳೆದಾಡಿದ ಯುವಕರು

Krishnaveni K
ಮಂಗಳವಾರ, 24 ಜೂನ್ 2025 (14:31 IST)
Photo Credit: X
ಬೆಂಗಳೂರು: ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಮಹಿಳೆಯನ್ನು ನಡು ರಸ್ತೆಯಲ್ಲೇ ವಿನಾಕಾರಣ ಎಳೆದಾಡಿ ಹಿಂಸಿಸಿದ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಆಗಿದೆ.


ಘಟನೆ ನಮ್ಮ ಬೆಂಗಳೂರಿನಲ್ಲೇ ನಡೆದಿದೆ ಎನ್ನುವುದು ಶಾಕಿಂಗ್ ವಿಚಾರವಾಗಿದೆ. ಬೆಂಗಳೂರಿನ ಬನ್ನೇರು ಘಟ್ಟ ರಸ್ತೆ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಒಬ್ಬ ಮಹಿಳೆ ಬುಟ್ಟಿ ಹಿಡಿದುಕೊಂಡು ತರಕಾರಿ ತರಲೆಂದು ಮನೆಯಿಂದ ಹೊರಟು ಎರಡು ಹೆಜ್ಜೆ ಮುಂದೆ ಬಂದಾಗ ಓರ್ವ ಕುಡುಕ ಹತ್ತಿರ ಬಂದು ಏನೋ ಕೆಟ್ಟದಾಗಿ ಮಾತನಾಡುತ್ತಾನೆ. ಆಗ ಇನ್ನೊಬ್ಬಾತ ಆತನನ್ನು ಎಳೆದು ಸ್ವಲ್ಪ ಕರೆದೊಯ್ಯುತ್ತಾನೆ. ಮಹಿಳೆ ಮತ್ತೆ ತನ್ನ ಪಾಡಿಗೆ ಮುಂದೆ ನಡೆಯಲು ಹೊರಟಾಗ ಮತ್ತೊಮ್ಮೆ ಅದೇ ಯುವಕ ಆಕೆಯನ್ನು ಅಡ್ಡಗಟ್ಟಿ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ.

ನಾಲ್ಕಾರು ಯುವಕರು ಸೇರಿಕೊಂಡು ಮಹಿಳೆಯ ಜುಟ್ಟು ಹಿಡಿದೆಳೆದು ಅಮಾನುಷವಾಗಿ ನಡೆದುಕೊಳ್ಳುತ್ತಾರೆ. ಇದನ್ನು ಕಂಡು ಅದೇ ದಾರಿಯಲ್ಲಿ ಬರುವ ಬೈಕ್ ಸವಾರರೊಬ್ಬರು ಆ ಮಹಿಳೆಯನ್ನು ರಕ್ಷಿಸಿ ಕರೆದುಯ್ಯುವಾಗ ಮತ್ತೆ ಬರುವ ಯುವಕರ ಗುಂಪು ಆತನ ಮೇಲೂ ಹಲ್ಲೆ ನಡೆಸುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಇಂತಹ ದುರುಳರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments