‌ತಿರುಮಲ ವೆಂಕಟೇಶ್ವರ ದೇವರ ಭಕ್ತರಿಗೆ ಗುಡ್‌ನ್ಯೂಸ್‌: ಲಡ್ಡುಗಾಗಿ ಇನ್ನೂ ಗಂಟೆಗಟ್ಟಲೆ ಕಾಯಬೇಕಿಲ್ಲ

Sampriya
ಮಂಗಳವಾರ, 24 ಜೂನ್ 2025 (14:21 IST)
Photo Credit X
ತಿರುಪತಿ:  ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆರಳುವ ಲಕ್ಷಾಂತರ ಭಕ್ತರಿಗೆ ಟಿಟಿಡಿ ಗುಡ್‌ನ್ಯೂಸ್‌ ನೀಡಿದೆ. 

ತಿರುಮಲದಲ್ಲಿ ಲಡ್ಡು ಮಾರಾಟ ಮಳಿಗೆಗಳನ್ನು ಟಿಟಿಡಿ ಇತ್ತೀಚೆಗೆ ಪರಿಚಯಿಸಿದೆ. ಭಕ್ತರು ಯುಪಿಐ ಪಾವತಿ ಮೂಲಕ ಹೆಚ್ಚುವರಿ ಲಡ್ಡು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಟಿಟಿಡಿಯ ಈ ವಿನೂತನ ಉಪಕ್ರಮಕ್ಕೆ ಭಕ್ತರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. 

ಪಾವತಿ ನಂತರ ದೊರೆಯುವ ರಶೀದಿಯೊಂದಿಗೆ ಹೆಚ್ಚುವರಿ ಲಡ್ಡುಗಳನ್ನು ಭಕ್ತರು ಪಡೆಯಬಹುದಾಗಿದೆ. ಭಕ್ತರು ಲಡ್ಡುಗಾಗಿ ಉದ್ದವಾದ ಸರತಿ ಸಾಲಿನಲ್ಲಿ ದೀರ್ಘ ಹೊತ್ತು ಕಾಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. 

ಭಕ್ತರು ಇಂಟರ್‌ಫೇಸ್‌ನ ಮೂಲಕ ಮಾರಾಟ ಮಳಿಗೆಗಳಲ್ಲಿ ತ್ವರಿತವಾಗಿ ಲಡ್ಡು ಸಂಗ್ರಹಿಸಬಹುದು. ಯುಪಿಐ ಪಾವತಿ ಆಯ್ಕೆಗಳ ಲಭ್ಯತೆಯಿಂದ ತಡೆರಹಿತ, ನಗದು ರಹಿತ ವಹಿವಾಟನ್ನು ಖಾತ್ರಿಪಡಿಸಲು ಅವಕಾಶವಿದೆ.

ಭಕ್ತರು ಲಡ್ಡು ವಿತರಣಾ ಕೌಂಟರ್‌ಗಳ ಬಳಿ ಸ್ಥಾಪಿಸಲಾದ ಮಳಿಗೆಗಳನ್ನು ಸಂಪರ್ಕಿಸಿದಾಗ ಎರಡು ಆಯ್ಕೆಗಳಿರುತ್ತವೆ. ಒಂದು ದರ್ಶನದ ಟಿಕೆಟ್ ಹೊಂದಿರುವವರಿಗೆ ಇದ್ದರೆ, ಮತ್ತೊಂದು ದರ್ಶನದ ಟಿಕೆಟ್ ಇಲ್ಲದವರಿಗೆ ಇರುತ್ತದೆ. 

ಅಂತರ್ನಿರ್ಮಿತ ವ್ಯವಸ್ಥೆಯು ಟಿಕೆಟ್ ವಿವರಗಳನ್ನು ಪರಿಶೀಲಿಸುತ್ತದೆ. ಯಾತ್ರಿಕರು ತಲಾ ಎರಡು ಲಡ್ಡುಗಳನ್ನು ಖರೀದಿಸಬಹುದು. ದರ್ಶನದ ಟಿಕೆಟ್ ಇಲ್ಲದವರಿಗೆ ಆಧಾರ್ ಕಾರ್ಡ್ ಆಧಾರದ ಮೇಲೆ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ. ಯುಪಿಐ ಮೂಲಕ ಪಾವತಿಸಬೇಕಾಗುತ್ತದೆ. ಭಕ್ತರು ಲಡ್ಡು ಸ್ವೀಕರಿಸಲು ರಸೀದಿ ಸಂಗ್ರಹಿಸಿ, ಕೌಂಟರ್‌ಗಳಿಗೆ ಹೋಗಬಹುದು. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments