ಮದುವೆ ದಿನ ತಮಾಷೆ ನೆಪದಲ್ಲಿ ವಧು, ವರನಿಗೆ ಇದೆಂಥಾ ಗತಿ: Viral video

Krishnaveni K
ಗುರುವಾರ, 4 ಡಿಸೆಂಬರ್ 2025 (16:46 IST)
ಮದುವೆ ಎಂದರೆ ಅಲ್ಲಿ ತಮಾಷೆ, ಫನ್ ಗೇಮ್ ಇರಲೇಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಅದು ಇಂತಹ ಘಟನೆಗಳನ್ನು ನೋಡಿಯೇ ಹೇಳಿರಬೇಕು. ಮದುವೆ ಮನೆಯೊಂದರ ವಿಡಿಯೋ ಒಂದು ಈಗ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ವಿಮರ್ಶೆಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮದುವೆ ಮನೆಯಲ್ಲಿ ಬಂಧು,ಮಿತ್ರರೇ ವಧೂ-ವರರಿಗೆ ಆಟದ ನೆಪದಲ್ಲಿ ಅಧ್ವಾನವೇ ಸೃಷ್ಟಿಸಿದ್ದಾರೆ. ಊಟಕ್ಕೆ ಕುಳಿತ ವಧೂ-ವರರಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದಾರೆ.

ವರ ಮತ್ತು ವಧುವಿನ ಕುತ್ತಿಗೆಗೆ ಬಾಟಲಿ, ಪಾತ್ರೆಗಳ ಹಾರ ಹಾಕಿದ್ದಾರೆ. ಬಳಿಕ ದೊಡ್ಡ ದೊಡ್ಡ ಬಾಸ್ಕೆಟ್ ನಲ್ಲಿ ಕಿಲೋಗಟ್ಟಲೆ ಆಹಾರ ವಸ್ತುಗಳನ್ನು ಸುರಿದಿದ್ದಾರೆ. ಅಲ್ಲದೆ, ಕೇಕ್ ತಂದು ಮುಖ, ಮೂತಿ ನೋಡದೇ ಮೆತ್ತಿದ್ದಾರೆ.

ಈ ವಿಡಿಯೋ ಈಗ ಸಾಕಷ್ಟು ಕಡೆ ಹರಿದಾಡುತ್ತಿದ್ದು ಪರ-ವಿರೋಧ ಅಭಿಪ್ರಾಯ ಕೇಳಿಬಂದಿದೆ. ಅಷ್ಟೊಂದು ಪ್ರಮಾಣದಲ್ಲಿ ಹಿಟ್ಟು ಸುರಿಯುವಾಗ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಏನು ಗತಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ: ಪಕ್ಷದಿಂದ ಅಮಾನತುಗೊಂಡ ಪಂ.ಬಂಗಾಳ ಶಾಸಕನ ಹೊಸ ನಡೆ

ವಿದೇಶದಿಂದ ಬರುವ ಗಣ್ಯರ ಭೇಟಿಗಿಲ್ಲ ಅವಕಾಶ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಾಸ್ಟರ್ ಸ್ಟ್ರೋಕ್

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 200ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು, ಇಲ್ಲಿದೆ ಮಾಹಿತಿ

ನಾವು ಮನೆಗೆ ಟೈಮೇ ಕೊಡಲ್ಲ, ನನ್ನ ಮಕ್ಳು ಮಾಡಿದ ಸಾಧನೆ ನಾನು ಮಾಡಿರಲಿಲ್ಲ: ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments