Select Your Language

Notifications

webdunia
webdunia
webdunia
webdunia

ರೊಚ್ಚಿಗೆದ್ದ ನಾಯಿ, ದೈತ್ಯ ಹಾವು ಪೀಸ್ ಪೀಸ್.. Viral video

Dog attacks snake
Photo Credit: X
ನಾಯಿಗಳು ಹಾವುಗಳನ್ನು ಕಂಡರೆ ಬೊಗಳುವುದು ಸಾಮಾನ್ಯ. ಆದರೆ ಈ ನಾಯಿ ಎಷ್ಟು ರೊಚ್ಚಿಗೆದ್ದಿತ್ತು ಎಂದರೆ ದೈತ್ಯ ಗಾತ್ರದ ಹಾವು ಪೀಸ್ ಪೀಸ್ ಆಗಿದೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

ನಾಯಿಗಳು ತಮ್ಮನ್ನು ಸಾಕುವವರಿಗಾಗಿ ಎಂಥಾ ರಿಸ್ಕ್ ಗೆ ಕೈ ಹಾಕಲೂ ರೆಡಿ ಇರ್ತಾರೆ. ಮನೆಗೆ ಬೇಡದ ಅತಿಥಿ ಬಂದರೆ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಾರೆ. ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ.

ಮನೆಯೊಂದರ ಗಾರ್ಡನ್ ನಲ್ಲಿ ಬೃಹತ್ ಗಾತ್ರದ ಹಾವು ತಲೆ ಎತ್ತಿ ನಿಂತಿರುತ್ತದೆ. ಇದನ್ನು ನೋಡಿದ ನಾಯಿ ಮೊದಲು ಬೊಗಳುತ್ತಾ ಓಡಿಸುವ ಪ್ರಯತ್ನ ಮಾಡುತ್ತದೆ. ಆಗ ಹಾವು ಕೂಡಾ ಕಚ್ಚಲು ನೋಡುತ್ತದೆ. ಆದರೆ ನಾಯಿ ಜಸ್ಟ್ ಎಸ್ಕೇಪ್ ಆಗುತ್ತದೆ.

ಹೀಗೇ ಇವರಿಬ್ಬರ ನಡುವೆ ಸೆಣಸಾಟ ಮುಂದುವರಿಯುತ್ತಿರುತ್ತದೆ. ಈ ವೇಳೆ ರೊಚ್ಚಿಗೆದ್ದ ನಾಯಿ ಸೀದಾ ಹಾವಿನ ಹೊಟ್ಟೆಗೇ ಬಾಯಿ ಹಾಕುತ್ತದೆ. ಸಿಟ್ಟಿನಲ್ಲಿ ಕಚ್ಚಿ ಎರಡು ಪೀಸ್ ಮಾಡಿ ಬಿಡುತ್ತದೆ. ಅಷ್ಟಕ್ಕೇ ಸುಮ್ಮನಾಗದೇ ಹಾವಿನ ತಲೆ ಭಾಗವನ್ನು ಕಚ್ಚಿ ಮತ್ತೆ ಬೊಗಳುತ್ತಿರುತ್ತದೆ. ನಾಯಿ ರೊಚ್ಚಿಗೆದ್ದ ರಭಸಕ್ಕೆ ಹಾವು ಪೀಸ್ ಪೀಸ್ ಆಗುತ್ತದೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

pic.twitter.com/ZkNkwOgzlq

 

— Mr DANJUMA (@danjuma1232) May 2, 2026

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಲ ಫಲಿತಾಂಶಕ್ಕೆ ಮುನ್ನ ದೀದಿ ಮಮತಾ ಬ್ಯಾನರ್ಜಿಗೆ ದೊಡ್ಡ ಹಿನ್ನಡೆ