Select Your Language

Notifications

webdunia
webdunia
webdunia
webdunia

ಯಲಹಂಕದಲ್ಲಿ ಬಿರುಸಿನ ಮತಯಾಚನೆ

Violent polling in Yalahanka
bangalore , ಭಾನುವಾರ, 30 ಏಪ್ರಿಲ್ 2023 (17:14 IST)
ದಿನದಿಂದ ದಿನಕ್ಕೆ ರಾಜ್ಯ ದಲ್ಲಿ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿ ಗಳು ಕೂಡ ಬಿರುಸಿನ ಮತಯಾಚನೆ ಮಾಡುವ ಮೂಲಕ ಅದೃಷ್ಟದ ಪರೀಕ್ಷೆ ಗೆ ಮುಂದಾಗಿದ್ದಾರೆ. ಇಂದು ಯಲಹಂಕ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ರುವ ಬಿಜೆಪಿ ಅಭ್ಯರ್ಥಿ  ಎಸ್ ಆರ್ ವಿಶ್ವನಾಥ್ ಮತಯಾಚನೆ ನಡೆಸಿದ್ರು. ಪ್ರೆಸ್ಟಿಜ್ ಓಯಾಸಿಸ್ ಅಪಾರ್ಟ್‌ಮೆಂಟ್ ಗೆ ಭೇಟಿ ನೀಡಿ ಅಸೋಸಿಯೇಷನ್ ಸದಸ್ಯರ ಜತೆ ಮಾತುಕತೆ ನಡೆಸಿ ,ಮತಯಾಚನೆ ಮಾಡಿ, ನಿಮಗೆ ಅಗತ್ಯ ವಿರುವ ಬಹುತೇಕ ಎಲ್ಲಾ ಕೆಲಸಗಳನ್ನ ಮಾಡಿದ್ದೇನೆ ಈ ಬಾರಿ ಕೂಡ ಮತಹಾಕಿ ಗೆಲ್ಲಿಸಿ ಅಲ್ದೆ ಈ ಬಾರಿ ಚುನಾವಣೆ ಯೂ ಬುಧವಾರ ಇದೆ ನೀವು ಕಡ್ಡಾಯವಾಗಿ ಮತ ಹಾಕಲೆಬೇಕು ಎಂದರು. ಇನ್ನು ಕಾರ್ಲಾಪುರಕ್ಕೆ ಭೇಟಿ ನೀಡಿದ ವಿಶ್ವನಾಥ್ ಬೈಕ್ ಓಡಿಸಿ ರ್ಯಾಲಿಯಲ್ಲಿ ಭಾಗಿಯಾಗುದ್ರು. ಅಲ್ಲದೆ ಇಲ್ಲಿನ ಯುವಕರು ಹೆಚ್ಚು ಉತ್ಸಾಹ ದಿಂದ ಕೆಲಸ ಮಾಡುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಪಣ ತೋಟ್ಟಿದ್ದಾರೆ. ನನಗೆ ಈ ಊರೇನು ಹೊಸದಲ್ಲ. ನಾನು ಇದೆ ಕ್ಷೇತ್ರದಲ್ಲಿ ಹುಟ್ಟಿದವನು , ಬೇರೆ ಕಡೆಯಿಂದ ಬಂದು ಎಲೆಕ್ಷನ್ ಗೆ ನಿಂತ್ತಿವರಿಗೆ ಈ ಕ್ಷೇತ್ರದ ಬಗ್ಗೆ ಅರಿವೇಯಿಲ್ಲ ಅಂತವರು ಏನು ತಾನೇ ಮಾಡಲು ಸಾಧ್ಯ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥ ಕಾರ್ಯಕ್ರಮ