Select Your Language

Notifications

webdunia
webdunia
webdunia
webdunia

ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ

ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ
ಬೆಂಗಳೂರು , ಮಂಗಳವಾರ, 2 ಮೇ 2023 (07:24 IST)
ಬೆಂಗಳೂರು : ಎಜ್ಯುಟೆಕ್ ಕಂಪನಿ ಬೈಜೂಸ್ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ ಅವರ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶಾನಲಯ ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದೆ.
 
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್ ಅವರ ಕಚೇರಿ ಮೇಲೆ ದಾಳಿ ಮಾಡಿದೆ. 
 
ಕಂಪನಿಯು 2011 ಮತ್ತು 2023 ರ ನಡುವೆ 28,000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ. ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಅದೇ ಅವಧಿಯಲ್ಲಿ ವಿದೇಶಿ ನ್ಯಾಯವ್ಯಾಪ್ತಿಗೆ ಸರಿಸುಮಾರು 9,754 ಕೋಟಿ ರೂ. ಕಳುಹಿಸಿದೆ.
 
ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಹಣ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ. ಲೆಕ್ಕ ತೋರಿಸಿದೆ. ಹೀಗಿದ್ದರೂ ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಯನ್ನು ನಾಲಾಯಕ್​ ಎಂದ ಪ್ರಿಯಾಂಕ್​