Publish Date: Sat, 18 Apr 2026 (12:45 IST)
Updated Date: Sat, 18 Apr 2026 (12:47 IST)
ಬೆಂಗಳೂರು: ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶಾಸಕ ವಿನಯ್ ಕುಲಕರ್ಣಿ ಮತ್ತು ಗೆಳೆಯ, ನಟ ದರ್ಶನ್ ತೂಗುದೀಪ ಈಗ ಅಕ್ಕಪಕ್ಕದ ಸೆಲ್ ನಲ್ಲೇ ಇದ್ದಾರೆ ಎನ್ನಲಾಗಿದೆ.
ನಿನ್ನೆ ಯೋಗೇಶ್ ಗೌಡ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿತ್ತು. ಅದರಂತೆ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಎಲ್ಲಾ ಅಪರಾಧಿಗಳೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ವಿನಯ್ ಕುಲಕರ್ಣಿಯವರನ್ನು ಇದೀಗ ಜೈಲಿನ ನಿಯಮದಂತೆ ಕ್ವಾರಂಟೈನ್ ಸೆಲ್ ನಲ್ಲಿರಿಸಲಾಗಿದೆ. ಇದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸೆಲ್ ನ ಪಕ್ಕದಲ್ಲೇ ಇದೆ ಎನ್ನಲಾಗಿದೆ.
ವಿಶೇಷವೆಂದರೆ ದರ್ಶನ್ ಮತ್ತು ವಿನಯ್ ಕುಲಕರ್ಣಿ ಆಪ್ತರು. ಪ್ರಾಣಿ ಪ್ರಿಯರಾದ ದರ್ಶನ್ ಆಗಾಗ ವಿನಯ್ ಕುಲಕರ್ಣಿಯವರ ಫಾರ್ಮ್ ಗೆ ಭೇಟಿ ನೀಡಿದ್ದೂ ಇದೆ. ಇದೀಗ ನಿನ್ನೆ ಜೈಲು ಶಿಕ್ಷೆ ಪ್ರಮಾಣ ಘೋಷಿಸಿದ ಬಳಿ ಪರಪ್ಪನ ಅಗ್ರಹಾರದಲ್ಲಿ ರಾತ್ರಿ ಕಳೆದ ವಿನಯ್ ಕುಲಕರ್ಣಿ ಸೇರಿದಂತೆ ಇಡೀ ಗ್ಯಾಂಗ್ ಕಣ್ಣೀರು ಹಾಕುತ್ತಾ ಕಾಲ ಕಳೆದಿದ್ದಾರೆ ಎನ್ನಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ