ರಾಯಚೂರು: ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿರುವ ಒಳಜಗಳದಿಂದಾಗಿ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ನಡೆಯಬಹುದು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ಅವರು ರಾಯಚೂರಿನ ಲಿಂಗಸೂರಿನಲ್ಲಿ ನಡೆದ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಅವರು ಸಿಎಂ ಆಗಬೇಕಾಲ್ವ. ಮುಖ್ಯಮಂತ್ರಿ ಆಗಬೇಕು ಅಂದರೆ ಎಲ್ಲರ ಸಹಕಾರ ಬೇಕೆಂದರು.
ರಾಜ್ಯ ಸರ್ಕಾರ ಹಳ್ಳಿಗಳಿಗೆ ಬಸ್ ಬಿಟ್ಟಿಲ್ಲ ಹೆಣ್ಮಕ್ಕಳು ಹೇಗೆ ಓಡಾಡುತ್ತಾರೆ. ಸರ್ಕಾರವೇ ಟೇಕ್ ಆಫ್ ಆಗಿಲ್ಲ, ರಾಜ್ಯದ ಜನರಿಗೆ ಟೋಪಿ ಹಾಕಿದ್ದಾರೆ. ಅಯೋಗ್ಯ ಜಮೀರ್ ಅಹ್ಮದ್‌ಗೆ ತಕ್ಕ ಉತ್ತರ ಕೊಡಬೇಕು. ವಕ್ಫ್ ಬೋರ್ಡ್ ರದ್ದಾಗಲು ನೋಟಿಸ್ ಕೊಟ್ಟಿದ್ದೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅವರಿಗೆ ತಕ್ಕ ಉತ್ತರ ಕೊಡಲು ಈ ಹೋರಾಟ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ, ಮುಡಾ ಹಗರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.