Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರಕ್ಕೆ ಮತ್ತೊಂದೆ ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್‌: ರೇಣುಕಾಚಾರ್ಯ ಆಕ್ರೋಶ

Chief Minister Siddaramaiah

Sampriya

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (18:31 IST)
ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ್ಮೇಲೆ ರಾಜ್ಯದಲ್ಲಿ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ತಮ್ಮ ಮೇಲೆ ವಾಲ್ಮೀಕಿ, ಮುಡಾ, ವಕ್ಫ್ ವಿವಾದ ಇದೆ. ಅಲ್ಪಸಂಖ್ಯಾತರ ಗುತ್ತಿಗೆದಾರಿಗೆ ಶೇ.4 ಮೀಸಲಾತಿ ನೀಡುವ ವಿವಾದ ಇದೆ.

ಯಾವಾಗ ಮುಡಾ ತನಿಖೆ ಗಂಭೀರವಾಗಲು ಪ್ರಾರಂಭ ಆಯ್ತೋ ಆಗ ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪ ಮೇಲೆ ಎಸ್‌ಐಟಿ ರಚನೆ ಮಾಡಿರುವುದಕ್ಕೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿಲ್ವಾ? ನೀವು ಅಧಿವೇಶನದಲ್ಲಿ 63 ಕೋಟಿ ರೂ. ಕೇಳಿದ್ರಿ ನಿಮಗೆ ಯಾವ ನೈತಿಕತೆ ಇದೆ? ವರ್ಗಾವಣೆ ದಂಧೆಯಲ್ಲಿಹಗಲು ದರೋಡೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಯಾದಗಿರಿಯಲ್ಲಿ ಪಿಎಸ್‌ಐ ಸಾವು ಆಯ್ತು. ಬೆಳಗಾವಿಯಲ್ಲಿ ಎಸ್‌ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯನವರೇ ಭ್ರಷ್ಟಾಚಾರಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಾ? ಎಸ್‌ಐಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೆಷನ್ ಟೀಮ್ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚೋದನಕರಿ ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದ ಪೊಲೀಸ್‌