ಬೆಂಗಳೂರು: ಎಲ್ಲೋ ಒಂದು ಕಡೆ ಮುಡಾ ಹಗರಣದ ಕಾನೂನು ಸುರುಳಿ ತಮ್ಮ ಬುಡಕ್ಕೆ ಬರುತ್ತಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಹತಾಶರಾಗಿ ಸಾರ್ವಜನಿಕವಾಗಿಯೇ ಸಿಟ್ಟು ಪ್ರದರ್ಶಿಸುತ್ತಿದ್ದಾರೆ ಎಂದು ಜೆಡಿಎಸ್ ಪೋಸ್ಟ್ ಮಾಡಿದೆ.
									
			
			 
 			
 
 			
					
			        							
								
																	ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ಕಾರ್ಯದರ್ಶಿ ಮೇಲೆ ಕೋಪಗೊಂಡರು. ಅದಲ್ಲದೆ ಈಚೆಗೆ  ಸಾರ್ವಜನಿಕವಾಗಿ ತಮ್ಮ ಅಸಮಾಧಾನ, ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
									
										
								
																	ಈ ಸಂಬಂಧ ಇಂದು ಜೆಡಿಎಸ್ ಪೋಸ್ಟ್ ಹಾಕಿ, ಇದಕ್ಕೆಲ್ಲ ಕಾರಣ ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವುದು ಎಂದಿದೆ.
									
											
									
			        							
								
																	ಪೋಸ್ಟ್‌ನಲ್ಲಿ ಹೀಗಿದೆ:  ʼಹತಾಶೆʼರಾಮಯ್ಯ
ಮುಡಾ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನೇ ದಿನೇ  ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ.
									
			                     
							
							
			        							
								
																	ಸಭೆ, ಸಮಾರಂಭಗಳಲ್ಲಿ ಜನರು, ಮಾಧ್ಯಮದವರು, ಕಾರ್ಯಕರ್ತರ ಮೇಲೆ ಸಿಎಂ ಸಿಟ್ಟು, ಆಕ್ರೋಶ ಹೊರಹಾಕುತ್ತಿದ್ದಾರೆ.
									
			                     
							
							
			        							
								
																	ಇಂದು ತಮ್ಮ ರಾಜಕೀಯ ಕಾರ್ಯದರ್ಶಿಗಳ ಮೇಲೂ ಸಿಡಿಮಿಡಿಗೊಂಡಿದ್ದರು.  ಎಲ್ಲೋ ಒಂದು ಕಡೆ ಮುಡಾ ಹಗರಣದ ಕಾನೂನು ಸುರುಳಿ ತಮ್ಮ ಬುಡಕ್ಕೆ ಬರುತ್ತಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಹತಾಶರಾಗಿ ಸಾರ್ವಜನಿಕವಾಗಿಯೇ ಸಿಟ್ಟು ಪ್ರದರ್ಶಿಸುತ್ತಿದ್ದಾರೆ.
									
			                     
							
							
			        							
								
																	ಈ ಸಿಡುಕು ವರ್ತನೆ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರ ಘನತೆಗೆ ಶೋಭೆ ತರುವುದಿಲ್ಲ.