Select Your Language

Notifications

webdunia
webdunia
webdunia
webdunia

ಚಂಡಮಾರುತದ ಎಫೆಕ್ಟ್‌: ಗಗನಕ್ಕೇರುತ್ತಿದೆ ಸೊಪ್ಪು, ತರಕಾರಿಗಳ ಬೆಲೆ

Fengal Cyclone Side Effect, Karnataka Vegetable Rate Hike, Tomatoes Rate Hike

Sampriya

ಬೆಂಗಳೂರು , ಗುರುವಾರ, 5 ಡಿಸೆಂಬರ್ 2024 (18:46 IST)
Photo Courtesy X
ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಇದೀಗ ಅಗತ್ಯದ ತರಕಾರಿಗಳ ಪೂರೈಕೆಗೆ ಅಡ್ಡಿಯಾಗುವುದರಿಂದ, ಇದು ಬೆಲೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಅಬ್ಬರದ ಮಳೆಯಿಂದಾಗಿ ಟೊಮೆಟೊ ಬೆಳೆಗಳು ಮತ್ತು ಸ್ಥಳೀಯವಾಗಿ ಬೆಳೆಯುವ ಈರುಳ್ಳಿಯ ಗುಣಮಟ್ಟಕ್ಕೂ ಹಾನಿಯಾಗಿದೆ.

ಮಳೆಯಿಂದಾಗಿ ಬೆಳೆಗೆ ಹಾನಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ  ಮುನ್ಸೂಚನೆಯನ್ನು ನೀಡಿದೆ. ಕೆಜಿಗೆ 30 ಇರುವ ಟೊಮೆಟೋ ಬೆಲೆ ಏಪ್ರಿಲ್ ಮೇ ತಿಂಗಳ ವೇಳೆಗೆ 90 ರೂಪಾಯಿಗೆ ಏರುವ ಸಾಧ್ಯತೆಯಿದೆ.  

ಕಳಪೆ ಪೂರೈಕೆಯಿಂದಾಗಿ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಮಳೆಯಿಂದಾಗಿ ತರಕಾರಿಗಳ ಗುಣಮಟ್ಟದಲ್ಲೂ ಪರಿಣಾಮ ಬಿದ್ದಿದೆ.  ಬೆಳ್ಳುಳ್ಳಿಯ ಬೆಲೆ ಒಂದು ಕೆಜಿಗೆ 530- 550 ರೂಪಾಯಿ ಮತ್ತು ಅಗತ್ಯ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪುಗಳು ಕ್ರಮವಾಗಿ ರೂ 98- 155 ಮತ್ತು ರೂ 135ರಷ್ಟು ಏರಿಕೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ನೂತನ ಸಿಎಂ ಫಡಣವೀಸ್ ಪ್ರಮಾಣವಚನಕ್ಕೆ ಬಾಲಿವುಡ್ ಸೆಲೆಬ್ರಿಟಿಸ್ ದಂಡು