Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿನ ವಿಡಿಯೋ ಮಾನಸಿಕ ಅಸ್ವಸ್ಥನನ್ನು ಮನೆಗೆ ಸೇರಿಸಿತು!

ಫೇಸ್ ಬುಕ್ ನಲ್ಲಿನ ವಿಡಿಯೋ ಮಾನಸಿಕ ಅಸ್ವಸ್ಥನನ್ನು ಮನೆಗೆ ಸೇರಿಸಿತು!
ಬಾಗಲಕೋಟ , ಭಾನುವಾರ, 7 ಅಕ್ಟೋಬರ್ 2018 (17:15 IST)
ಫೇಸ್ ಬುಕ್ ನಲ್ಲಿ ಹಾಕಿದ ವಿಡಿಯೋ ಮೂಲಕ ಐದು ವರ್ಷಗಳಿಂದ ಕುಟುಂಬದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಮರಳಿ ಕುಟುಂಬ ಸೇರಿದ ಮನ ಮಿಡಿಯುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಈ ಘಟನೆ ನಡೆದಿದೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹ ಎಂಬ ಮಾನಸಿಕ ಅಸ್ವಸ್ಥನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ  ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ. ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್  ಜೋಗಿ ಎಂದೇ ಕರೆಯುತ್ತಿದ್ದರು. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ
ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದ.

ಮನೆಯವರೆಲ್ಲರೂ ಹುಡುಕಿ ಸುಸ್ತಾಗಿದ್ದರು. ಇನ್ನು ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ  ಇಳಕಲ್ ನಗರದಲ್ಲಿ ಸರ್ವವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೇ ಬಕೆಟ್ ಹಿಡಿದು ನೀರು ಹಾಕುತ್ತಿದ್ದ. ಮಾನಸಿಕ ಅಸ್ವಸ್ಥನಾಗಿದ್ದರೂ ಈತನ ಗಿಡದ ಮೇಲಿನ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಕೊನೆಗೆ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್ ಲೈಕ್ ಕಮೆಂಟ್ ಪಡೆಯುತ್ತಾ ನರಸಿಂಹನ ಕುಟುಂಬದ ಗಮನಕ್ಕೂ ಬಂದಿದೆ. ಕೂಡಲೆ ಕುಟುಂಬಸ್ಥರು ಇಳಕಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಆಗ ಸ್ಥಳೀಯರು   ತಲೆ ತುಂಬ ಕೂದಲು ಬಿಟ್ಟಿದ್ದ ಆತನ‌ ಕ್ಷೌರ ಮಾಡಿಸಿ ಆತನನ್ನು ಸ್ನಾನ‌ಮಾಡಿಸಿ ಹೊಸ ಟಿ ಶರ್ಟ್ ಹಾಕಿಸಿ ಮನೆಗೆ ಕಳಿಸಿ ಕೊಟ್ಟಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಮಹಾನಗರ ಪಾಲಿಕೆಯಾಗುತ್ತ ಹಾಸನ ಹೆಜ್ಜೆ