Publish Date: Tue, 31 Mar 2026 (15:13 IST)
Updated Date: Tue, 31 Mar 2026 (15:16 IST)
ಮಂಗಳೂರು: ಇಲ್ಲಿನ ಗೇರುಕಟ್ಟೆ ಬಳಿ ವೇಗವಾಗಿ ಸಾಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಿಂದ ಇಬ್ಬರು ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯರು ಬಿದ್ದ ಶಾಕಿಂಗ್ ವಿಡಿಯೋವೊಂದು ವೈರಲ್ ಆಗಿದೆ.
ಮಂಗಳೂರಿನ ಗೇರುಕಟ್ಟೆ ಬಳಿ ನಡೆದ ಘಟನೆ ಇದಾಗಿದೆ. ಕೆಲವೊಮ್ಮೆ ಬಸ್ ಚಾಲಕರು ತಮ್ಮ ಅತಿಯಾದ ವೇಗದ ಚಾಲನೆಯಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಬಸ್ ಗಳೂ ಕಡಿಮೆಯಿರುವುದರಿಂದ ಹೆಚ್ಚಾಗಿ ನೂಕುನುಗ್ಗಲಿನ ಪರಿಸ್ಥಿತಿ.
ಅದೇ ರೀತಿ ಘಟನೆ ಇಲ್ಲಿ ನಡೆದಿದೆ. ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕೆಎಸ್ ಆರ್ ಟಿಸಿ ಬಸ್ ಹತ್ತಿದ್ದ ವಿದ್ಯಾರ್ಥಿನಿಯರು ಬೆಳ್ತಂಗಡಿಯ ಗೇರುಕಟ್ಟೆ ಬಳಿ ಅತ್ಯಂತ ತಿರುವಿನ ರಸ್ತೆಯಲ್ಲಿ ವೇಗದ ಚಾಲನೆಯಿಂದ ಬಸ್ ನಿಂದ ರಸ್ತೆಗೆ ಬಿದ್ದಿದ್ದಾರೆ.
ಅಪಾಯಕಾರಿ ತಿರುವಿನಲ್ಲಿ ಚಾಲಕ ಜವಾಬ್ಧಾರಿಯುತವಾಗಿ ಚಾಲನೆ ಮಾಡಬೇಕಿತ್ತು. ಆದರೆ ಚಾಲಕನ ವೇಗದ ಚಾಲನೆಯ ಕಾರಣಕ್ಕೆ ಇಬ್ಬರು ವಿದ್ಯಾರ್ಥಿನಿಯರು ಈಗ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ.