Daily Horoscope

Select Your Language

Notifications

webdunia
webdunia
webdunia
webdunia

Video: ಖಾಸಗಿ ಬಸ್ ಬಾಗಿಲ ಬಳಿ ನಿಂತಿದ್ದಾಗಿ ಅಚಾನಕ್ ಆಗಿ ಬಿದ್ದು ಪ್ರಾಣ ಕಳೆದುಕೊಂಡ ವೃದ್ಧ ಮಹಿಳೆ

Video of woman falling from bus
Photo Credit: X
ಕೊಯಮತ್ತೂರು: ಖಾಸಗಿ ಬಸ್ ನಲ್ಲಿ ಬಾಗಿಲ ಬಳಿ ನಿಂತಿದ್ದಾಗ ಅಚಾನಕ್ ಆಗಿ ಆಯತಪ್ಪಿ ಬಿದ್ದ ವೃದ್ಧ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

ಈ ಘಟನೆ ನಡೆದಿರುವುದು ಕೊಯಮತ್ತೂರಿನಲ್ಲಿ. ಬಸ್ ನಲ್ಲಿ ಸಂಚರಿಸುವಾಗ ಬಾಗಿಲ ಬಳಿ ನಿಲ್ಲುವುದು ಅಪಾಯಕಾರಿ ಎಂದು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ. ರಶ್ ಇಲ್ಲದೇ ಇದ್ದರೂ ಬಾಗಿಲು ತೆರೆದಿದ್ದಾಗ ಬಾಗಿಲ ಬಳಿ ನಿಲ್ಲುವುದು ಸರಿಯಲ್ಲ.

ಇದೇ ರೀತಿ ಕೊಯಮತ್ತೂರಿನಲ್ಲಿ ಖಾಸಗಿ ಬಸ್ ಒಂದರಲ್ಲಿ 66 ವರ್ಷದ ವೃದ್ಧ ಮಹಿಳೆ ಸಂಚರಿಸುತ್ತಿದ್ದರು. ಕೊವೈಪದೂರಿನಲ್ಲಿ ನಡೆದ ಘಟನೆಯಿದು. ತನ್ನ ನಿಲ್ದಾಣ ಬಂತೆಂದು ಮಹಿಳೆ ಸೀಟ್ ನಿಂದ ಎದ್ದು ಬಾಗಿಲ ಕಡೆಗೆ ಹೋಗುವ ಪ್ರಯತ್ನದಲ್ಲಿದ್ದರು.

ಇನ್ನೂ ಬಸ್ ನಿಂತಿರಲಿಲ್ಲ. ಈ ವೇಳೆ ಆಯತಪ್ಪಿದ ಮಹಿಳೆ ತೆರೆದಿದ್ದ ಬಾಗಿಲ ಮೂಲಕ ಕೆಳಗೆ ಬಿದ್ದೇ ಬಿಟ್ಟರು. ಬಿದ್ದರಭಸಕ್ಕೆ ಅಲ್ಲಿಯೇ ಮಹಿಳೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

pic.twitter.com/Y2jfCAkQ6J

 

— Wilson Thomas (@wilson__thomas) March 29, 2026

Share this Story:

Follow Webdunia kannada

ಮುಂದಿನ ಸುದ್ದಿ

ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮನೆಯಲ್ಲಿ ದಾಂಧಲೆ Video