Select Your Language

Notifications

webdunia
webdunia
webdunia
webdunia

ದನವನ್ನು ಬೈಕ್ ನಲ್ಲಿ ಕೂರಿಸಿಕೊಂಡು ರೈಡ್ ಮಾಡಿದ ಭೂಪ: ವಿಡಿಯೋ ನೋಡಿದ್ರೂ ನಿಮಗೆ ನಂಬಲು ಕಷ್ಟ

Viral video cow
Photo Credit: X
ದೈತ್ಯ ಗಾತ್ರದ ದನವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಾರೆ ಎಂದರೆ ನೀವು ನಂಬಲು ಆಗುತ್ತಾ? ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್ ನಲ್ಲಿ ಎದುರುಗಡೆ ದನವನ್ನು ಕೂರಿಸಿಕೊಂಡು ರೈಡ್ ಮಾಡಿದ್ದಾನೆ. ಈ ವಿಡಿಯೋ ಇಲ್ಲಿದೆ ನೋಡಿ.

ನಮ್ಮ ಜನರಿಗೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕ್ಷಿಯೇ ಈ ವಿಡಿಯೋ. ರೈತರು ತಮ್ಮ ಸಾಕು ಪ್ರಾಣಿಗಳನ್ನು ಸ್ವಂತ ಮಕ್ಕಳಂತೇ ನೋಡಿಕೊಳ್ಳುತ್ತಾರೆ. ಆದರೆ ಈತನಂತೂ ತನ್ನ ಮಕ್ಕಳನ್ನು ಕರೆದುಕೊಂಡು ಹೋಗುವ ರೀತಿ ದನವನ್ನೇ ಬೈಕ್ ಹತ್ತಿಸಿದ್ದಾನೆ.

ಹೆದ್ದಾರಿಯಲ್ಲಿ ಸಾಗುವಾಗ ತಮ್ಮ ಕಣ್ಣಿಗೆ ಬಿದ್ದ ದೃಶ್ಯವನ್ನು ಕಾರು ಸವಾರರೊಬ್ಬರು ಸೆರೆ ಹಿಡಿದಿದ್ದಾರೆ. ಓರ್ವ ವ್ಯಕ್ತಿ ರಸ್ತೆಯಲ್ಲಿ ತನ್ನ ದನವನ್ನು ಬೈಕ್ ಎದುರುಗಡೆ ಸೀಟ್ ನಲ್ಲಿ ಕೂರಿಸಿಕೊಂಡಿದ್ದಾರೆ. ದನ ಕೂಡಾ ಕಾಲು ಮುಂದೆ ಚಾಚಿ ಅಲ್ಲಾಡದೇ ಕೂತಿದೆ.

ಬೈಕ್ ಸವಾರ ತೀರಾ ಹಿಂದೆ ಕೂತಿದ್ದಾನೆ. ಹಾಗಿದ್ದರೂ ಬ್ಯಾಲೆನ್ಸ್ ಮಾಡಿಕೊಂಡು ವೇಗವಾಗಿ ಬೈಕ್ ಚಲಾಯಿಸುತ್ತಾನೆ. ಈ ವಿಡಿಯೋ ನೋಡಿ ನೆಟ್ಟಿಗರೇ ಹೌಹಾರಿದ್ದಾರೆ. ದನವನ್ನು ಎದುರು ಕೂರಿಸಿಕೊಂಡಿದ್ದೇ ಒಂದು ಪವಾಡ. ಅದರ ಮೇಲೆ ಈತ ಬೈಕ್ ಚಲಾಯಿಸುತ್ತಿರುವುದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

pic.twitter.com/jggD8u2fd4

 

— Nonfa KING (@ajeezayGH) March 27, 2026

Share this Story:

Follow Webdunia kannada

ಮುಂದಿನ ಸುದ್ದಿ

Video: ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ ಗೆ ವೇಗವಾಗಿ ಬಂದು ಗುದ್ದಿದ ಬೈಕ್, ಕ್ಷಣ ಮಾತ್ರದಲ್ಲಿ ಹಾರಿತು ಜೀವ