Publish Date: Fri, 27 Mar 2026 (09:00 IST)
Updated Date: Fri, 27 Mar 2026 (09:05 IST)
ಮಳೆಯಲ್ಲಿ ನೆನೆದು ಒದ್ದೆಯಾಗಲಿದ್ದ ಬೆಕ್ಕಿನ ಮರಿಯಂತೆ ನಾಯಿಯೊಂದು ತಂದೆಯಂತೆ ರಕ್ಷಣೆ ನೀಡಿ ಕಾಪಾಡಿದ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಬೆಕ್ಕು ಮತ್ತು ನಾಯಿ ಪರಸ್ಪರ ಶತ್ರುಗಳಂತೆ ಆಡುತ್ತಾರೆ. ಬೆಕ್ಕುಗಳು ಓಡಾಡುವುದನ್ನು ಕಂಡರೆ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತವೆ. ಅಪರೂಪಕ್ಕೆ ಕೆಲವು ಸಾಕು ನಾಯಿಗಳು ಮಾತ್ರ ಅದೇ ಮನೆಯ ಬೆಕ್ಕುಗಳ ಜೊತೆ ಫ್ರೆಂಡ್ ಶಿಪ್ ಮಾಡುವುದು ಇದೆ.
ಇಲ್ಲಿಯೂ ಅದೇ ರೀತಿ ಆಗಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಬೆಕ್ಕಿನ ಮರಿಯೊಂದು ನೆನೆಯುತ್ತಿತ್ತು. ಆ ಬೆಕ್ಕಿಗೆ ಮಳೆ ನೀರು ಬೀಳದಂತೆ ನಾಯಿಯೊಂದು ಅದನ್ನು ತನ್ನ ದೇಹದೊಳಗೆ ಬೆಚ್ಚಗೆ ಇರಿಸಿತ್ತು. ವಿಶೇಷವೆಂದರೆ ನಾಯಿ ಮಳೆಗೆ ಸಂಪೂರ್ಣ ಒದ್ದೆಯಾಗಿತ್ತು.
ಇದನ್ನು ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ನೋಡಿ ಗಾಡಿ ನಿಲ್ಲಿಸಿ ಬೆಕ್ಕನ್ನು ಹಿಡಿಯಲು ಹೋದರೆ ನಾಯಿ ಕಚ್ಚಲು ಬಂದಿತ್ತು. ಕೊನೆಗೆ ಹೇಗೋ ಫ್ರೆಂಡ್ ಶಿಪ್ ಮಾಡಿ ಬೆಕ್ಕು ಮತ್ತು ನಾಯಿಯನ್ನು ತಮ್ಮ ಜೊತೆಗೇ ಕಾರಿನಲ್ಲಿ ಕರೆದೊಯ್ದಿದ್ದಾರೆ. ಈ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ.