Daily Horoscope

Select Your Language

Notifications

webdunia
webdunia
webdunia
webdunia

ಆಂಧ್ರಪ್ರದೇಶದ ಮಾರ್ಕಪುರಂನಲ್ಲಿ ಭೀಕರ ಬಸ್ ದುರಂತ: 10 ಜನ ಸುಟ್ಟು ಕರಕಲು, ಭೀಕರ ಇಲ್ಲಿದೆ Video

Viral video of Andhra Pradesh bus accident
Photo Credit: X
ಆಂಧ್ರಪ್ರದೇಶದ ಮಾರ್ಕಪುರಂನಲ್ಲಿ ಭೀಕರ ಬಸ್ ದುರಂತ ಸಂಭವಿಸಿದೆ. ಬಸ್ ಗೆ ಬೆಂಕಿ ತಗುಲಿದ್ದು ಘಟನೆಯಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಭೀಕರ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಖಾಸಗಿ ಬಸ್ ಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ವರದಿಯಾಗಿದೆ. ಮಾರ್ಕಪುರಂನಲ್ಲಿ ಖಾಸಗಿ ಬಸ್ ಟಿಪ್ಪರ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಜಗ್ತಿಯಾಲ್ ನಿಂದ ವಿಂಜಾಮುರ್ ಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಇದಾಗಿತ್ತು. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು ಸುಟ್ಟು ಗಾಯಗಳಾಗಿದ್ದ ಸುಮಾರು 20 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗಿನ ಜಾವ 5.45 ಕ್ಕೆ ಘಟನೆ ನಡೆದಿರುವುದಾಗಿ ವರದಿಯಾಗಿದೆ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಹಾಗಿದ್ದರೂ ಸಾಕಷ್ಟು ಜನರ ಪ್ರಾಣ ಹಾನಿಯಾಗಿದೆ. ಪೊಲೀಸರು ಈಗ ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.

pic.twitter.com/W39wVXi2N0

 

— Chaudhary Parvez (@ChaudharyParvez) March 26, 2026

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಹತ್ತುವ ಗಡಿಬಿಡಿಯಲ್ಲಿ ಚಕ್ರದಡಿಗೆ ಸಿಲುಕಿದ ವಿದ್ಯಾರ್ಥಿನಿಯ ಕಾಲು: ಭಯಾನಕ Video