Select Your Language

Notifications

webdunia
webdunia
webdunia
webdunia

ಕೊರೊನಾ ವಾರ್ಡಿನಲ್ಲಿ ವಿಡಿಯೋ ಮಾಡಿದ್ರೆ ಜೈಲು ಫಿಕ್ಸ್

ಕೊರೊನಾ ವಾರ್ಡಿನಲ್ಲಿ ವಿಡಿಯೋ ಮಾಡಿದ್ರೆ ಜೈಲು ಫಿಕ್ಸ್
ಕಲಬುರಗಿ , ಶುಕ್ರವಾರ, 1 ಮೇ 2020 (21:31 IST)
ಕೊರೊನಾ ವೈರಸ್ ಸೋಂಕಿರುವ ರೋಗಿಗಳ ಕೋವಿಡ್ ವಾರ್ಡ್ ಗಳಲ್ಲಿ ಕದ್ದುಮುಚ್ಚಿ ಫೋಟೋ ತೆಗೆದರೆ ಅಥವಾ ವಿಡಿಯೋ ಮಾಡಿದ್ರೆ ಹುಷಾರ್.  

ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿರುವ ಕೊರೊನಾ ವೈರಸ್ ಸೋಂಕಿರುವ ರೋಗಿಗಳ ಕೋವಿಡ್ ವಾರ್ಡ್, ಐಸೋಲೇಷನ್ ವಾರ್ಡ್, ಕ್ವಾರಾಂಟೈನ್ ಕೇಂದ್ರಗಳಿಗೆ ಹೊರಗಿನ ವ್ಯಕ್ತಿಗಳು ಹೋಗಿ, ವೀಡಿಯೋ ಮಾಡುವುದು, ಫೋಟೋ ತೆಗೆಯುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಬಂದಿದ್ದು, ಇಂಥವರನ್ನು ಪ್ರೈಮರಿ ಕಾಂಟ್ಯಾಕ್ಟ್ ಆಗಿ ಕ್ವಾರಾಂಟೈನ್ ಮಾಡಬೇಕು. ಜೊತೆಗೆ ಇಂತಹವರ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣೆ (ಎನ್‍ಡಿಎಂ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ  ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಖಡಕ್ಕಾಗಿ ಹೇಳಿದ್ದಾರೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾತನಾಡಿ, ಈಗಾಗಲೇ ವ್ಯಕ್ತಿಯೊಬ್ಬರ ಮಾಹಿತಿ ಪಡೆದಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಆಸ್ಪತ್ರೆ ನಿರ್ದೇಶಕರು ಮಾಹಿತಿ ನೀಡಿದಲ್ಲಿ, ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಹೊರ ರಾಜ್ಯಗಳಿಂದ ಬಂದವರನ್ನು ಹೀಗೆ ಮಾಡಿ ಎಂದು ಉಸ್ತುವಾರಿ