Select Your Language

Notifications

webdunia
webdunia
webdunia
webdunia

ಹೊರ ರಾಜ್ಯಗಳಿಂದ ಬಂದವರನ್ನು ಹೀಗೆ ಮಾಡಿ ಎಂದು ಉಸ್ತುವಾರಿ

ಹೊರ ರಾಜ್ಯಗಳಿಂದ ಬಂದವರನ್ನು ಹೀಗೆ ಮಾಡಿ ಎಂದು ಉಸ್ತುವಾರಿ
ಕಲಬುರಗಿ , ಶುಕ್ರವಾರ, 1 ಮೇ 2020 (21:09 IST)
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೊರರಾಜ್ಯ ಮತ್ತು ಹೊರಜಿಲ್ಲೆಯಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಬೇಕು.

ಹೀಗಂತ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಸೂಚಿಸಿದ್ದಾರೆ.

ಜಿಲ್ಲೆಯ ಗಡಿಗಳಲ್ಲಿ ತಪಾಸಣಾ ಶಿಬಿರ ತೆರೆದು, ಜ್ವರ ಸೇರಿದಂತೆ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳ ಕುರಿತು ಪರೀಕ್ಷಿಸಬೇಕು. ಬಳಿಕ ಅವರನ್ನು 28 ದಿನಗಳ ಕಾಲ ಕ್ವಾರಾಂಟೈನ್‍ನಲ್ಲಿಟ್ಟು ನಿಗಾವಹಿಸಬೇಕು ಎಂದಿದ್ದಾರೆ.

ತೆಲಂಗಾಣದಲ್ಲಿರುವ ಕಲಬುರಗಿ ಜಿಲ್ಲೆಯ ಜನತೆಗೆ ಅಲ್ಲಿಯ ಸರ್ಕಾರ ಪಾಸ್ ಕೊಟ್ಟು ಕಳುಹಿಸುತ್ತಿದೆ. ಗಡಿಯಲ್ಲಿ ಇವರೆಲ್ಲರನ್ನೂ ಕೂಡ ತಪಾಸಣೆ ಮಾಡಿ, ಜಿಲ್ಲೆಯೊಳಗೆ ಕರೆದುಕೊಳ್ಳಬೇಕು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಪರೀಕ್ಷೆ ಇನ್ಮುಂದೆ ಸುಲಭ, ಶೀಘ್ರ, ಕಡಿಮೆ ವೆಚ್ಚ