Publish Date: Fri, 01 May 2020 (09:37 IST)
Updated Date: Fri, 01 May 2020 (09:39 IST)
ಬೆಂಗಳೂರು : ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಕ್ವಾರಂಟೈನ್ ಗೆ ವಿರೋಧ ವ್ಯಕ್ತಪಡಿಸಿ ಸುಂಕದಕಟ್ಟೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಕ್ಷಣಕ್ಕಾಗಿ ರಾಜಸ್ತಾನಕ್ಕೆ ತೆರಳಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿದ್ದರು. ಕೊರೊನಾ ಭೀತಿ ಹಿನ್ನಲೆಯಲ್ಲಿ ಅವರನ್ನು ಸುಂಕದಕಟ್ಟೆ ಸರ್ಕಾರಿ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿಡಲು ಸಿದ್ಧತೆ ಮಾಡಲಾಗಿದೆ.
ಆದರೆ ಕೊರೊನಾ ಹರಡುವ ಭಯದಿಂದ ಸುಂಕದಕಟ್ಟೆಯಲ್ಲಿ ಸ್ಥಳೀಯರು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಕ್ವಾರಂಟೈನ್ ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.