Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನ ಮಕ್ಕಳ ಜೊತೆ ತಿಂಡಿ, ದಾನ ಧರ್ಮ ಮಾಡಿದ ಬಿಎಸ್ ಯಡಿಯೂರಪ್ಪ Video

BS Yediyurappa
Photo Credit: X
ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ 84 ನೇ ಜನ್ಮದಿನ ಂದು. ಹುಟ್ಟುಹಬ್ಬದ ದಿನ ಯಡಿಯೂರಪ್ಪ ತಮ್ಮ ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ದಾನ ಧರ್ಮ ಮಾಡಿದ್ದಲ್ಲದೆ ಬಳಿಕ ಮಕ್ಕಳ ಜೊತೆ ಕೂತು ತಿಂಡಿ ಸವಿದಿದ್ದಾರೆ.

ಇಂದು ಬೆಳಗ್ಗೆ ಶಿಕಾರಿಪುರದ ಆರಾಧ್ಯದೈವ, ಐತಿಹಾಸಿಕ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ದಿವ್ಯಾಂಗರಿಗೆ ವಾಹನವಾಹನಗಳನ್ನು ಹಾಗೂ ತಾಯಂದಿರಿಗೆ, ಸಹೋದರಿಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಇನ್ನು ದೇವಾಲಯದ ಅರ್ಚಕರು, ಚೆಂಡೆ ವಾದಕರಿಗೂ ಬಿಎಸ್ ವೈ ದಕ್ಷಿಣೆ ನೀಡಿದರು.

ಇನ್ನು ಪೂಜೆ, ದಾನ ಧರ್ಮಗಳ ಬಳಿಕ ಬಿಎಸ್ ವೈ ತಮ್ಮ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ ಜೊತೆಗೇ ಕೂತು ತಿಂಡಿ ಸವಿದಿದ್ದಾರೆ. ಈ ನಡುವೆ ಸಾಕಷ್ಟು ಜನ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಂಜನೇಯ ಸ್ವಾಮಿಯೇ ಈತನ ಜೀವ ಕಾಪಾಡಿದ: ಮೈ ಜುಮ್ ಎನಿಸುವ ವಿಡಿಯೋ