Publish Date: Fri, 27 Feb 2026 (11:16 IST)
Updated Date: Fri, 27 Feb 2026 (11:23 IST)
ಬೆಂಗಳೂರು: ತುಟಿ ಕಚ್ಚಿದ ವಿಚಿತ್ರ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಲಾಯರ್ ನಡುವಿನ ಸಂಭಾಷಣೆ ಈಗ ವೈರಲ್ ಆಗಿದೆ.
ಕೆಲವೊಮ್ಮೆ ಕೋರ್ಟ್ ಗೆ ಎಂಥಾ ವಿಚಿತ್ರ ಮತ್ತು ವಿಶೇಷ ಪ್ರಕರಣಗಳು ಬರುತ್ತವೆ ನೋಡಿ. ಮೊನ್ನೆಯಷ್ಟೇ ಗಂಡ-ಹೆಂಡತಿ ಲಟ್ಟಣಿಗೆಯಲ್ಲಿ ಹೊಡೆದಿದ್ದರ ಪ್ರಕರಣದ ವಿಚಾರಣೆ ನಡೆಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಾರಿ ಇಬ್ಬರು ಕಿತ್ತಾಡಿಕೊಂಡು ತುಟಿ ಕಚ್ಚಿದ ಪ್ರಕರಣದ ವಿಚಾರಣೆ ನಡೆದ ವಿಡಿಯೋ ವೈರಲ್ ಆಗಿದೆ. ವಕೀಲರು ಪ್ರಕರಣದ ವಿವರಣೆಯನ್ನು ನ್ಯಾಯಾಧೀಶರ ಮುಂದಿಡುತ್ತಿದ್ದರು. ಈ ವೇಳೆ ಪ್ರಕರಣದ ವಿವರಣೆ ಓದುತ್ತಿದ್ದ ನ್ಯಾಯಾಧೀಶರಿಗೆ ಒಂದು ಅನುಮಾನ ಬರುತ್ತದೆ.
ನನಗೆ ಒಂದು ಡೌಟು, ನೀವ್ಯಾಕೆ ದೂರುದಾರರ ತುಟಿ ಕಚ್ಚಲು ಹೋದಿರಿ ಎಂದು ಕೇಳುತ್ತಾರೆ. ಈ ವೇಳೆ ವಕೀಲರಿಗೂ ನಗುವೋ ನಗು. ಅತ್ತ ನ್ಯಾಯಾಧೀಶರೂ ಇದನ್ನು ತಮಾಷೆಯಾಗಿ ಪ್ರಶ್ನೆ ಮಾಡಿರುತ್ತಾರೆ. ಬಳಿಕ ಪ್ರಕರಣದ ಮುಂದಿನ ತೀರ್ಪನ್ನು ನ್ಯಾಯಾಧೀಶರು ಹೇಳುತ್ತಾರೆ.