Publish Date: Tue, 09 Dec 2025 (16:59 IST)
Updated Date: Tue, 09 Dec 2025 (17:01 IST)
ಬೆಂಗಳೂರು: ರಾಜ್ಯ ಸರ್ಕಾರ ಋತು ಚಕ್ರ ರಜೆಗೆ ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆಗೆ ಕೆಲವೇ ಕ್ಷಣಗಳಲ್ಲಿ ಬದಲಾವಣೆ ತಂದಿದೆ. ಬೆಳಿಗ್ಗೆ ಹೋಟೆಲ್ ಮಾಲಿಕರ ಸಂಘದ ಮನವಿ ಮೇರೆಗೆ ತಡೆಯಾಜ್ಞೆ ನೀಡಲಾಗಿತ್ತು.
ಇತ್ತೀಚೆಗೆ ರಾಜ್ಯ ಸರ್ಕಾರ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳಾ ನೌಕರರಿಗೆ ಮಾಸಿಕವಾಗಿ ಒಂದು ದಿನದ ಋತುಚಕ್ರ ರಜೆ ಕಡ್ಡಾಯಗೊಳಿಸಿ ಆದೇಶ ನೀಡಿತ್ತು. ಇದರ ವಿರುದ್ಧ ಬೆಂಗಳೂರು ಹೋಟೆಲ್ ಮಾಲಿಕರ ಸಂಘ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ತೀರ್ಪಿಗೆ ತಡೆಯಾಜ್ಞೆ ತಂದಿತ್ತು. ಆದರೆ ಇದರ ಬೆನ್ನಲ್ಲೇ ಸರ್ಕಾರದ ಪರ ವಕೀಲರು ಮನವಿ ಸಲ್ಲಿಸಿದ್ದರು. ಹೀಗಾಗಿ ಬೆಳಿಗ್ಗೆ ನೀಡಿದ್ದ ತೀರ್ಪಿಗೆ ಕೆಲವೇ ಕ್ಷಣಗಳಲ್ಲಿ ಮಾರ್ಪಾಡು ತಂದ ಹೈಕೋರ್ಟ್ ಸದ್ಯಕ್ಕೆ ತಡೆಯಾಜ್ಞೆ ಇಲ್ಲ ಎಂದಿದೆ. ಹೀಗಾಗಿ ಈಗ ಈ ನಿಯಮ ಮುಂದುವರಿಯಲಿದೆ.
ಸರ್ಕಾರ ಯಾವುದೇ ಸಂಸ್ಥೆಗಳ ಅಭಿಪ್ರಾಯ ಕೇಳದೇ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ. ಇದರಿಂದ ಹೋಟೆಲ್ ಗಳಿಗೆ ತೊಂದರೆಯಾಗುತ್ತದೆ ಎಂದು ಹೋಟೆಲ್ ಮಾಲಿಕರ ಸಂಘ ಆಕ್ಷೇಪಣೆ ಸಲ್ಲಿಸಿತ್ತು.