Publish Date: Fri, 27 Feb 2026 (10:57 IST)
Updated Date: Fri, 27 Feb 2026 (11:00 IST)
ಇಸ್ಲಾಮಾಬಾದ್: 55 ಸೈನಿಕರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಯುದ್ಧ ಸಾರಿದೆ. ಅಫ್ಘಾನಿಸ್ತಾನದ ಹಲವೆಡೆ ವೈಮಾನಿಕ ದಾಳಿ ನಡೆಸಿರುವ ಪಾಕಿಸ್ತಾನ ಅಧಿಕೃತವಾಗಿ ಯುದ್ಧ ಘೋಷಿಸಿದೆ.
ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದ ಅಫ್ಘಾನಿಸ್ತಾನ 55 ಸೈನಿಕರನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ನೆರೆಯ ರಾಷ್ಟ್ರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಕಾಬೂಲ್, ಕಂದಹಾರ್, ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ.
ಮೊದಲು ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಪ್ರತಿದಾಳಿ ನಡೆಸಿ 55 ಸೈನಿಕರನ್ನು ಕೊಂದು ಹಾಕಿತ್ತು. ಇದರಿಂದ ರೊಚ್ಚಿಗೆದ್ದ ಪಾಕಿಸ್ತಾನ ಈಗ ಯುದ್ಧ ಘೋಷಣೆ ಮಾಡಿದ್ದು ಕಾಬೂಲ್ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 130 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಇದೀಗ ಅಫ್ಘಾನಿಸ್ತಾನದ ಪ್ರಮುಖ ಮಿಲಿಟರಿ ಕೇಂದ್ರಗಳನ್ನೇ ಗುರಿಯಾಗಿಸಿ ದಾಳಿ ಮಾಡುವುದಾಗಿ ಹೇಳಿದೆ. ಪಾಕಿಸ್ತಾನದ ಮಿಲಿಟರಿ ದಾಳಿಗೆ ಅಫ್ಘಾನಿಸ್ತಾನದ ನಾಗರಿಕರು, ಮಕ್ಕಳೂ ಬಲಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.