Select Your Language

Notifications

webdunia
webdunia
webdunia
Thursday, 10 April 2025
webdunia

ವಾಹನ ಓಡಿಸುವವರೇ ಎಚ್ಚರ..!!! (ರಾಜಧಾನಿಯಲ್ಲಿ ಹೃದಯವಿದ್ರಾವಕ ದುರಂತ )...!!!

Crime
ಬೆಂಗಳೂರು , ಶುಕ್ರವಾರ, 22 ಜುಲೈ 2022 (17:02 IST)
ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಹೃದಯವಿದ್ರಾಕ ದುರಂತವೊಂದು ಸಂಭವಿಸಿದೆ. ಆಟವಾಡುತ್ತಾ ಕುಳಿತಿದ್ದ ಒಂದೂವರೆ ವರ್ಷದ ಕಂದಮ್ಮ, ಆಕಸ್ಮಿಕವಾಗಿ ತಂದೆ ಚಾಲನೆ ಮಾಡುತ್ತಿದ್ದ ವಾಹನಕ್ಕೇ ಬಲಿಯಾಗಿದ್ದು, ತಂದೆಯ ಗೋಳಾಟ ನೋಡಲಾಗುತ್ತಿಲ್ಲ.
 
ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಮೃತ ದುರ್ದೈವಿ. ಬಾಲಕೃಷ್ಣ ಇಚರ್ ವಾಹನ ಚಾಲಕರಾಗಿದ್ದರು. ಮನೆ ಬಳಿ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಮನಿಶಾ ವಾಹನಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಮಗುವನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು.
 
ಚಿಕಿತ್ಸೆ ಫಲಿಸದೆ ಮನಿಶಾ ಆಶ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗಳ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿ, ಮಗಳ ಸಾವಿಂದ ಕಂಗೆಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್ ಸಾಧನಗಳ ಬಳಕೆ ಮಕ್ಕಳಿಗೆ ಹೆಚ್ಚುತ್ತಿದ್ದೆ ಕಣ್ಣಿನ ಸಮಸ್ಯೆ.. ಪೋಷಕರೇ ಎಚ್ಚರ..!!!!