Select Your Language

Notifications

webdunia
webdunia
webdunia
webdunia

ಯೂಟ್ಯೂಬ್ ಚಾನೆಲ್ ತಂದ ಆಪತ್ತು ...!!!

webdunia
ಬೆಂಗಳೂರು , ಶುಕ್ರವಾರ, 22 ಜುಲೈ 2022 (15:21 IST)
ಯೂಟ್ಯೂಬ್‌ ಚಾನೆಲ್ ನಲ್ಲಿ
ಯಾರು ಲೈಕ್ ಮಾಡ್ತಿಲ್ಲ, ಸಬ್‌ಸ್ಕ್ರೈಬರ್‌ ಹೆಚ್ಚಾಗುತ್ತಿಲ್ಲ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಗ್ವಾಲಿಯರ್‌ನ ಭಾರತೀಯ ಮಾಹಿತಿ ತಂತ್ರಜ್ಞಾನ ಹಾಗೂ ನಿರ್ವಹಣಾ ಕಾಲೇಜಿನಲ್ಲಿ ((IIITM) ಅಧ್ಯಯನ ನಡೆಸುತ್ತಿದ್ದ  23 ವರ್ಷದ ಧೀನಾ ಎಂಬ ವಿದ್ಯಾರ್ಥಿ ತಾನು ವಾಸಿಸುತ್ತಿದ್ದ ಮನೆಯ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಮಹಡಿಯಿಂದ ಕೆಳಗೆ ಹಾರಿದ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಸಾವಿಗೆ ಶರಣಾಗಿದ್ದಾನೆ. ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

"ನಟಿ ನಿವೇದಿತಾ ಗೌಡ ಈಗ "ಮಿಸೆಸ್ ಇಂಡಿಯಾ " ಹೇಗೆ ಗೊತ್ತ??