ಮೊಸರು, ಮಜ್ಜಿಗೆ ಮತ್ತು ಪ್ಯಾಕ್ ಮಾಡಿದ ದಿನಸಿಗಳ ಮೇಲೆ ಜಿಎಸ್ಟಿ ಪ್ರೇರಿತ ದರ ಹೆಚ್ಚಳ ಮಾಡಲಾಗಿದೆ. ಇದರ ಕರಿನೆರಳಿನಲ್ಲೇ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಹಣ್ಣುಗಳು ತರಕಾರಿಗಳು ಮತ್ತು ಸೊಪ್ಪಿನ ಬೆಲೆಯೂ ಏರಿಕೆಯಾಗುತ್ತಿದೆ. ಇದರ ಜೊತೆಗೆ ಹಬ್ಬಗಳೂ ಇರುವ ಕಾರಣದಿಂದ ತರಕಾರಿಗಳ ಬೆಲೆ ಗಗನಕ್ಕೆ ಏರಿದೆ. ತರಕಾರಿ ಮತ್ತು ಸೊಪ್ಪಿನ ಬೆಲೆ ಶೇ. 50- 60 ಏರಿಕೆಯಾಗಿದ್ದು ಕಳೆದ 20 ದಿನಗಳಿಂದ ನಿರಂತರ ಮಳೆ ಹಾಗೂ ವಾತಾವರಣದಲ್ಲಿನ ಏರುಪೇರಿ ನಿಂದಾಗಿ ರೈತರಿಗೆ ಬೆಳೆಯನ್ನು ಸರಿಯಾಗಿ ಬೆಳೆಸಲು ಸಾದ್ಯವಾಗುತ್ತಿಲ್ಲ ಹಾಗಾಗಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಜಾಸ್ತಿಯಾಗಿದೆ. ಇದರಿಂದ ಯಶವಂತಪುರ, ಕೆ.ಆರ್. ಮಾರುಕಟ್ಟೆ ಗಳಲ್ಲಿ ತರಕಾರಿ ದರ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಜನ ಸಾಮಾನ್ಯರು ಮತ್ತೆ ಬೆಲೆ ಏರಿಕೆ ಪರಿಣಾಮವನ್ನು ಅನುಭವಿಸಬೇಕಿದೆ.