Select Your Language

Notifications

webdunia
webdunia
webdunia
webdunia

ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ರಚನೆ

ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ರಚನೆ
ಬೆಂಗಳೂರು , ಮಂಗಳವಾರ, 17 ಅಕ್ಟೋಬರ್ 2017 (08:54 IST)
ಬೆಂಗಳೂರು: 2018 ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. 15 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿ ಮತ್ತು 94 ಜನರನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚಿಸಿ ಎಐಸಿಸಿ ಆದೇಶ ಹೊರಡಿಸಿದೆ. ಇದರ ನಡುವೆ ನೂತನ ಚುನಾವಣಾ ಪ್ರಣಾಳಿಕೆ ಸಮಿತಿ ರಚಿಸಿದೆ. ಇದರ ನೇತೃತ್ವವನ್ನು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿಗೆ ವಹಿಸಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್‌.ಆರ್‌.ಪಾಟೀಲ್‌, ದಿನೇಶ್‌ ಗುಂಡೂರಾವ್‌, ಸಚಿವರಾದ ರಾಮಲಿಂಗಾರೆಡ್ಡಿ, ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಡಾ. ಎಚ್‌.ಸಿ ಮಹದೇವಪ್ಪ, ಕೆ.ಜೆ. ಜಾರ್ಜ್‌, ಯು.ಟಿ. ಖಾದರ್‌, ಎಚ್‌.ಎಂ. ರೇವಣ್ಣ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಉಮಾಶ್ರೀ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ, ಎಐಸಿಸಿ ಕಾರ್ಯದರ್ಶಿ ಸತೀಶ್‌ ಜಾರಕಿಹೊಳಿ, ಶಾಸಕರಾದ ಅಪ್ಪಾಜಿ ನಾಡಗೌಡ, ವಿನಯ್ ಕುಮಾರ್‌ ಸೊರಕೆ, ಕೆ.ಎನ್‌. ರಾಜಣ್ಣ, ಕೆ.ಸಿ.ಕೊಂಡಯ್ಯ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್, ಮಾಜಿ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್‌, ಮಾಜಿ ಶಾಸಕ ನಂಜಯ್ಯನ ಮಠ, ಅಲ್ಲಮಪ್ರಭು ಪಾಟೀಲ್‌, ಎಲ್‌.ಹನುಮಂತಯ್ಯ, ಜೆ.ಅಲೆಕ್ಸಾಂಡರ್‌, ವೆಂಕಟರಾವ್‌ ಘೋರ್ಪಡೆ, ಮಾಜಿ ಸಂಸದ ಐ.ಜಿ.ಸನದಿ, ಪ್ರೊ. ರಾಧಾಕೃಷ್ಣ, ಡಾ.ಲೋಹಿತ್‌ ನಾಯ್ಕರ್‌, ಪುಷ್ಪಾ ಅಮರನಾಥ, ಜಮೀರ್‌ ಪಾಷಾ ಹಾಗೂ ಡಾ. ಸಯ್ಯದ್ ನಾಸಿರ್‌ ಹುಸೇನ್‌ ರನ್ನು ಪ್ರಣಾಳಿಕೆ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಹಾರ ಚೆಲ್ಲುವ ಮೊದಲು ಈ ಬಾಲಕಿಯ ಕತೆ ಓದಿ!