Select Your Language

Notifications

webdunia
webdunia
webdunia
webdunia

ಎಸ್‌ಐಟಿಯಿಂದ ಶೀಘ್ರವೇ ಗೌರಿ ಹಂತಕರ ಬಂಧನ : ರಾಮಲಿಂಗಾರೆಡ್ಡಿ

ಎಸ್‌ಐಟಿಯಿಂದ ಶೀಘ್ರವೇ ಗೌರಿ ಹಂತಕರ ಬಂಧನ :  ರಾಮಲಿಂಗಾರೆಡ್ಡಿ
ಬೆಂಗಳೂರು , ಶುಕ್ರವಾರ, 8 ಸೆಪ್ಟಂಬರ್ 2017 (17:37 IST)
ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಗಲಿರಳು ಎನ್ನದೇ ಹಂತಕರ ಜಾಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವು ಅಗತ್ಯ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 
 ತನಿಖೆ ನಡೆಸುತ್ತಿರುವ ತನಿಖಾ ತಂಡಕ್ಕೆ ದೂರವಾಣಿ ಮುಖಾಂತರವಾಗಲಿ ಅಥವಾ ಇ-ಮೇಲ್ ಮೂಲಕವಾಗಲಿ ಮಾಹಿತಿ ನೀಡಬಹುದು. ಇಲ್ಲವೇ ನೇರವಾಗಿ ತಮ್ಮನ್ನು ಭೇಟಿಯಾಗಿ ಸುಳಿವು ನೀಡಬಹುದು ಎಂದು ತಿಳಿಸಿದ್ದಾರೆ. 
 
ಗೌರಿ ಲಂಕೇಶ್ ಹತ್ಯೆ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ವಹಿಸಿಕೊಂಡಿದ್ದು, ಶೀಘ್ರಧಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.
 
 ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹಂತಕರ ಬಗ್ಗೆ ಸುಳಿವು ನೀಡಿದಲ್ಲಿ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಪ್ರಕರಣ: ಬಿಜೆಪಿಗೆ ಸತ್ಯಾಂಶ ಬೇಕಿಲ್ಲ ಎಂದ ಸಚಿವ ಜಾರ್ಜ್