Select Your Language

Notifications

webdunia
webdunia
webdunia
webdunia

ಇಂದಿನಿಂದ ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಇಂದಿನಿಂದ ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
bangalore , ಗುರುವಾರ, 17 ಆಗಸ್ಟ್ 2023 (15:00 IST)
ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.ಸಿಗ್ನಲಿಂಗ್‌ ಪರೀಕ್ಷೆ ಹಿನ್ನೆಲ್ಲೆ ಆಗಸ್ಟ್ 17ರಿಂದ ಆ.29ರವರೆಗೆ ನೇರಳೆ ಮಾರ್ಗ ವಿಸ್ತರಣೆಯ ಕಾಮಗಾರಿ ನಡೆದಿದ್ದು, ಕೆಂಗೇರಿ-ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ- ಕೃಷ್ಣರಾಜಪುರ ಮೆಟ್ರೋ ಸಮಚಾರಕ್ಕೆ ತಯಾರಿ ನಡೆಸಲಾಗಿದೆ.
 
ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲು ಸೇವೆ ಇರೋದಿಲ್ಲ .ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಇರುತ್ತೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮತ್ತು ಮೈಸೂರು ರಸ್ತೆ- ಬೈಯಪ್ಪನ ಹಳ್ಳಿ ನಡುವೆ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ.ಆಗಸ್ಟ್ 23 ಮತ್ತು ಆ. 24ರಂದು ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರೋದಿಲ್ಲ .ಬೆಳಗ್ಗೆ 7 ಗಂಟೆ ನಂತರ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ.ಆಗಸ್ಟ್ 20 ರಿಂದ 29ರ ತನಕ ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ- ಬೈಯಪ್ಪನಹಳ್ಳಿ, ಕೆ.ಆರ್.ಪುರ, ವೈಟ್ಫೀಸಲ್ಡ್  ನಡುವೆ ಬೆಳಗ್ಗೆ 5 ರಿಂದ 7 ರ ತನಕ ರೈಲು ಸಂಚಾರ ಇರುವುದಿಲ್ಲ.ಸಂಚಾರ ವ್ಯತೆಯದಿಂದ ಸಹಕರಿಸುವಂತೆ ಬಿಎಂಆಸಿಎಲ್ ಮನವಿ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 29ರವರೆಗೆ ನೇರಳೆ ಮಾರ್ಗ ಸೇವೆ ವ್ಯತ್ಯಯ