ನೂತನ ಮನೆಗೆ ವಾಜಪೇಯಿ ಹೆಸರಿಟ್ಟು ಅಭಿಮಾನ ಮೆರೆದ ಚಾಲಕ!

Webdunia
ಶನಿವಾರ, 17 ನವೆಂಬರ್ 2018 (18:39 IST)
ಅಜಾತ ಶತೃ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನ ತಮ್ಮ ನೂತನ ಮನೆಗೆ ಇಡುವ ಮೂಲಕ ಕಾರ್ ಚಾಲಕನೋರ್ವ ಆದರ್ಶ ಮೆರೆದ ಘಟನೆ ನಡೆದಿದೆ.

ಗದಗದ ಪಂಚಾಕ್ಷರಿ ನಗರದ ನಿವಾಸಿ ವೀರಭದ್ರಪ್ಪ ಡಂಬಳ ಎಂಬುವರು ತಮ್ಮ ಕನಸಿನ ಮನೆಗೆ ವಾಜಪೇಯಿ ನಿವಾಸ ಎಂದು ಹೆಸರಿಟ್ಟಿದ್ದಾರೆ. ಸ್ಥಳೀಯ ಸಾರ್ವಜನಿಕರ ಸಮ್ಮುಖದಲ್ಲಿ ನಾಮಫಲಕ ಉದ್ಘಾಟಿಸಿದರು. ನಂತರ ಪುಷ್ಪಗಳಿಂದ ಅಲಂಕಾರಗೊಂಡ ಅಟಲ್ ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನೂತನ ನಿವಾಸದ ಉದ್ಘಾಟನೆಯಲ್ಲಿ ಪಾಲ್ಗೊಂಡವರಿಗೆ ಸಿಹಿ ಹಂಚಿದರು. ವೃತ್ತಿಯಲ್ಲಿ ಕಾರ್ ಡ್ರೈವರ್ ವೀರಭದ್ರಪ್ಪ ಇವರು, ಹದಗೆಟ್ಟ ರಸ್ತೆಗಳಿಂದ ಬೇಸತ್ತಿದ್ದ ಸಂದರ್ಭದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ವೇಳೆ ದೇಶಾದ್ಯಂತ ಚತುಷ್ಪತ ರಸ್ತೆ, ಗ್ರಾಮ ಸಡಕ್ ಯೋಜನೆಯಂತ ರಸ್ತೆ ಯೋಜನೆಗಳನ್ನ ಜಾರಿಗೆ ತಂದು ವಾಹನ ಚಾಲಕರಿಗೆ ಆಗುವ ತೊಂದರೆಗಳನ್ನ ನಿವಾರಿಸಿದ್ದರು. ಈ ಕಾರಣದಿಂದ ಮನೆಗೆ ವಾಜಪೇಯಿ ನಿವಾಸ ಎಂದು ಹೆಸರಿಟ್ಟಿದ್ದೇನೆ ಅಂತಿದ್ದಾರೆ ಕಾರ್ ಚಾಲಕ ವೀರಭದ್ರಪ್ಪ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನೆರೆಹೊರೆಯವರಿಗೆ ಈಗ್ಲೇ ಮೆಣಶಿನಕಾಯಿ ಇಟ್ಟಂಗೆ ಆಗಿರ್ಬೇಕು: ಪ್ರಿಯಾಂಕ್ ಖರ್ಗೆಗೆ ನಾರಾ ಲೋಕೇಶ್ ಟಾಂಗ್

ಶಾಲೆಗಳಲ್ಲಿ ಸಂಘಟನೆಗಳ ಚಟುವಟಿಕೆ ಇರಬಾರದು ಎಂದು ಹೇಳಿದ್ದೇ ಬಿಜೆಪಿಯವರು: ಪ್ರಿಯಾಂಕ್ ಖರ್ಗೆ ಬಾಂಬ್

ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್

ಕಾಂಗ್ರೆಸ್ ನಲ್ಲಿ ಅಧಿಕಾರಿಗಳ ಸಾವಿಗೂ ಗ್ಯಾರಂಟಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆಯನ್ನು ನಿಂದಿಸುವುದು ಸಭ್ಯತೆಯಲ್ಲ, ಅವರ ಜೊತೆ ನಾವಿದ್ದೇವೆ: ಕೃಷ್ಣಭೈರೇಗೌಡ

ಮುಂದಿನ ಸುದ್ದಿ
Show comments