Select Your Language

Notifications

webdunia
webdunia
webdunia
webdunia

ಬಾರ್ ಗಳಿಗೆ ವಾಜಪೇಯಿ ಹೆಸರಿಡ್ತಾರಾ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬಾರ್ ಗಳಿಗೆ ವಾಜಪೇಯಿ ಹೆಸರಿಡ್ತಾರಾ? ಪ್ರಿಯಾಂಕ್ ಖರ್ಗೆ ಪ್ರಶ್ನೆ
bengaluru , ಶನಿವಾರ, 14 ಆಗಸ್ಟ್ 2021 (21:09 IST)

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆವಿ ಡ್ರಿಂಕರ್ ಅಂತೆ. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಹೆಸರಿಡುತ್ತಾರಂತಾ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ನೆಹರೂ ಹೆಸರಲ್ಲಿ ಹುಕ್ಕಾ ಬಾರ್ ಆರಂಭಿಸಿ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿಕೆಗೆ ಕಲಬುರಗಿಯಲ್ಲಿ ಶನಿವಾರ ತಿರುಗೇಟು ನೀಡಿದ ಅವರು, ವಾಜಪೇಯಿ ಅವರಿಗೆ ಸಂಜೆಗೆ ಎರಡು ಪೇಗ್ ಡ್ರಿಂಕ್ ಬೇಕಾಗಿತ್ತು ಅಂತೆ. ಹಾಗಂತ ಬಾರ್ ಗಳಿಗೆ ಅವರ ಹಸರು ಇಡ್ತಾರಾ? ನಾನು ವಾಜಪೇಯಿ ಬಗ್ಗೆ ಮಾತನಾಡಿದ್ದರಿಂದ ವಾಜಪೇಯಿ ಅವರ ಬಗೆಗಿನ ಘನತೆ ಕಡಿಮೆ ಆಗುತ್ತಾ ಹಾಗೆ ನೆಹರೂ ಅವರದ್ದು ಕೂಡ ಎಂದರು.

ಬಿಜೆಪಿಯವರು ಎಲ್ಲರು ಸಾಚಾಗಳೆ ಅಂತಾ ಭಾವಿಸಬೇಕು. ಸಿಡಿ ಪ್ರಕರಣದಿಂದ ದೇಶದಲ್ಲಿ ಮರ್ಯಾದೆ ಹೋಗಿದೆ. ನೆಹರು ಬಗ್ಗೆ ರವಿ ಮಾತಾಡೋದ್ರಿಂದ ನೇಹರು ಘನತೆ ಏನು ಕಡಿಮೆ ಆಗೋದಿಲ್ಲ ಎಂದು ಅವರು ಹೇಳಿದರು.

ಸಾವರ್ಕರ್ ಏನು ಕೊಡುಗೆ ಇದೆ, ಸಾವರ್ಕರ್ ಅಂತ ಪ್ಲೈ ಓವರ್ ಗೆಹೆಸರು ಇಡ್ತಾರೆ. ಗೋಡ್ಸೆಯನ್ನ ನಂಬತ್ತಾರೆ. ಗಾಂಧಿಯವರು ನಂಬೋದಿಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದ್ರೆ ಹಿಂಗೆ ಮಾತಾಡೋದು. ಈ ರೀತಿ ಮಾತನಾಡೋದು ಅವಿವೇಕಿತನದ ಪರಮಾವಧಿ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಹಸೂಗೂಸು ಗೋಳಾಡಿತಲೇ, ಭೂ ಲೋಕ ನಡುಗಿತಲೇ: ಕಾರ್ಣಿಕ ಭವಿಷ್ಯ