Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಭೇಟಿ ಮಾಡಿದ ವಚನಾನಂದ ಸ್ವಾಮೀಜಿ

Vachanananda Swamiji visited by Siddaramaiah
bangalore , ಬುಧವಾರ, 7 ಡಿಸೆಂಬರ್ 2022 (20:08 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಪಂಚಮಸಾಲಿಪೀಠದ ವಚನಾನಂದ ಸ್ವಾಮೀಜಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿ ಸ್ವಾಮೀಜಿ ಸಿದ್ದರಾಮಯ್ಯ ಅವರು ಅನೇಕ ವರ್ಷಗಳಿಂದ ಆಪ್ತರು.ಮುಖ್ಯಮಂತ್ರಿ ಆಗುವುದಕ್ಕೂ ಮೊದಲಿನಿಂದಲೇ ಪರಿಚಯ, ಕಳೆದ ಒಂದು ವಾರದ ಹಿಂದೆ ಆಪರೇಷನ್ ಆಗಿತ್ತು ಹಾಗಾಗಿ ಮಾತನಾಡಿಸೋಕೆ ಬಂದಿದ್ದೆ, ಹಿಂದೆ ಮಠಕ್ಕೆ ಬಂದಿದ್ದಾಗ ಮನೆಗೆ ಬಂದಿದ್ದ ವೇಳೆ ಮನೆಗೆ ಬರುವಂತೆ ಹೇಳಿದ್ದರು .ಹಾಗಾಗಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ ಎಂದರು ಇನ್ನೂ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಡೆಡ್ ಲೈನ್ ವಿಚಾರ ಕೂರಿತು ಮಾತನಾಡಿ ನಿನ್ನೆ ನಾವು ಮುಕ್ತವಾಗಿ ಮಾತನಾಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಬೇಡ ಸಮಾಜಕ್ಕೆ ಸ್ಪಷ್ಟ ಸಂದೇಶ ಸಿಗಬೇಕು ಎನ್ನುವ ಕಾರಣಕ್ಕಾಗಿ ಮಾತಾಡಿದ್ದೇವೆ. ಜಯಪ್ರಕಾಶ್ ಹೆಗಡೆ ಅವರ ಜೊತೆಗೆ ಮುಖ್ಯಮಂತ್ರಿಗಳು ಮಾತನಾಡಿದರು.  ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಶಾಶ್ವತ ಆಯೋಗದ ವರದಿ ಮೇಲೆ ಘೋಷಣೆ ಮಾಡಲಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯೊಂದಿಗೆ ಹುಲಿ ಮರಿ ಹೆಜ್ಜೆ