Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾದ ಕೈಪಡೆ

ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾದ ಕೈಪಡೆ
bangalore , ಬುಧವಾರ, 7 ಡಿಸೆಂಬರ್ 2022 (18:12 IST)
ವೋಟರ್ ಐಡಿ ಗೋಲ್ ಮಾಲ್ ಪ್ರಕರಣ ಹಿನ್ನೆಲೆ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ‌ ಕೈ ಪಡೆ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಕ್ಷೇತ್ರವಾರು ಮಾಹಿತಿ ಕಲೆ ಹಾಕಲು‌ ಮುಂದಾಗಿದೆ.ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕರು ಪತ್ರ ಬರೆದಿದ್ದು,28 ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರಿಂದ ಕ್ಷೇತ್ರದ ಮತದಾರ ನೋಂದಣಾಧಿಕಾರಿ, ಕಂದಾಯ ಅಧಿಕಾರಿ, ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
 
ಪತ್ರ ಬರೆಯುವ ಮೂಲಕ ಮಾಹಿತಿ ಸಂಗ್ರಹದ ಬಳಿಕ ಸುದ್ದಿ ಗೋಷ್ಠಿ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ತೀರ್ಮಾನ ಮಾಡಿದ್ದಾರೆ.ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರ ಶಾಸಕ ಕೃಷ್ಣಭರೇಗೌಡ ಬರೆದ ಪತ್ರ ಸದ್ಯಕ್ಕೆ ಲಭ್ಯವಾಗಿದೆ.ಇನ್ನೂ ಪತ್ರದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಗಳ ವಿರುದ್ಧ ಮತದಾರ ಸೇರ್ಪಡೆ,ಸಾವಿರಾರು ಜನರನ್ನು ‌ಮತದಾರರ ಪಟ್ಟಿಯಿಂದ‌ ಕೈ ಬಿಟ್ಟಿರುವುದು,ತಿದ್ದುಪಡಿ, ವರ್ಗಾವಣೆ ಮಾಡಿರುವುದು ಅನುಮಾನಗಳಿಗೆ ದಾರಿ‌‌ ಮಾಡಿಕೊಟ್ಟಿದೆ.ಆದ್ದರಿಂದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಕ್ಟೋಬರ್‌ 21 ರಿಂದ‌ ನವೆಂಬರ್ 2022 ರವರೆಗೆ ಪಟ್ಟಿಗೆ ಸೇರಿಸಿರುವ, ಕೈ ಬಿಟ್ಟಿರುವ, ತಿದ್ದುಪಡಿ, ವರ್ಗಾವಣೆ ಮಾಡಿರುವ ಪ್ರತಿಯೊಂದು ವಿಭಾಗವಾರು ಮಾಹಿತಿ ನೀಡಿ ಜೊತೆಗೆ ಮತದಾರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ.ಇನ್ನು ಇತ್ತ ಆದೇಶ ಪ್ರತಿಗಳ ಸಮೇತ ವಿಭಾಗವಾರು ಮಾಹಿತಿ ನೀಡಿ ಎಂದು ಭೈರೇಗೌಡ ಕೇಳಿದ್ದು,ಆ ಮೂಲಕ ಮತ್ತೊಂದು ಹಂತದ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಣ್ಣತನದ ರಾಜಕೀಯ ಬಿಟ್ಟು ಜೀವನ ಮಾಡಿ ಎಂದು ಡಿಕೆ ಸುರೇಶ್ ವಿರುದ್ಧ ಗುಡುಗಿದ ಮುನಿರತ್ನ