Select Your Language

Notifications

webdunia
webdunia
webdunia
webdunia

ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳ

ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳ
bangalore , ಬುಧವಾರ, 7 ಡಿಸೆಂಬರ್ 2022 (18:02 IST)
ಆತ ಡಬಲ್ ಮರ್ಡರ್‌ ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿದ್ದವನು,ಲಾಯರ್ ಗಳ ಮೇಲಿನ ದ್ವೇಷಕ್ಕೆ ಆತ ಪ್ರತಿಕಾರ ತೀರಿಸಿಕೊ ಬೇಕು ಅಂತ  ಶಪತ  ಮಾಡಿದ್ದ ಖತರ್ನಾಕ್ ಕಳ್ಳ . ಕುಟುಂಬ ವೊಂದನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ರಾಬರಿ ಮಾಡಿದ್ದವನನ್ನ  20 ನಿಮಿಷದಲ್ಲಿ ಅರೆಸ್ಟ್ ಮಾಡಿದ್ದಾರೆ.

ಕುಟುಂಬವೊಂದು ಕಾರಿನಲ್ಲಿ ಹೊರಗಡೆ ಹೋಗಿ ಬರುತ್ತಿದ್ದಾಗ ಅಟ್ಯಾಕ್ ಮಾಡಿದ್ದ ಮನ್ಸೂರ್ ದಾನ್ ಹಾಗೂ ಆತನ ಗ್ಯಾಂಗ್‌ನಿಂದ ಕೃತ್ಯ ಎಸಗಲಾಗಿದೆ.ಡಿಸೆಂಬರ್ 5ನೇ ತಾರೀಕಿನಂದು‌ ಘಟನೆಯು ನಡೆದಿದ್ದು, ಅಹಮದ್ ಕುಟುಂಬದವರ ಎಂಬುವವರ ಮೇಲೆ ಮನ್ಸೂರ್ ದಾನ್, ಅಬ್ದುಲ್ ಹಾಗೂ ಮತ್ತೊಬ್ಬ ಹಲ್ಲೆ ನಡೆಸಿದ್ದಾರೆ. ಸ್ನೇಹಿತರ ಮನೆಯಿಂದ ವಾಪಾಸ್ ಬರೋವಾಗ ಬೈಕಿನಲ್ಲಿ ಬಂದು ಕಾರಿಗೆ ಗುದ್ದಿ ನಂತರ ಮನ್ಸೂರ್ ಗ್ಯಾಂಗ್ ಅಟ್ಯಾಕ್ ಮಾಡಿದ್ದಾರೆ. ವೃತ್ತಿಯಲ್ಲಿ ಅಶ್ವರ್ಕ್ ಅಹಮದ್ ಮೆಡಿಕಲ್ ನಡೆಸುತ್ತಿದ್ದು, ಕಾರಿನಿಂದ ಈತನನ್ನು ಹೊರಗಡೆ ಎಳೆದು ಹಾಕಿ ಮನ್ಸೂರ್ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ನಾಗವಾರ ಬಳಿಯ ಕನಕನಗರ ರಸ್ತೆಯ 13ನೇ ಕ್ರಾಸಿನಲ್ಲಿ ಘಟನೆ ನಡೆದಿದ್ದು, ಮೊಬೈಲ್, ಹಣ ಕಿತ್ತುಕೊಂಡು ಕಾರಿನ‌ ಕೀ ತೆಗೆದುಕೊಂಡು ಮನ್ಸೂರ್ ಗ್ಯಾಂಗ್ ಪರಾರಿಯಾಗಿದ್ದರು.

ಇನ್ನೂ ಮನ್ಸೂರ್ ದಾನ್  ದರೋಡೆ ಮಾಡುವ ಮುನ್ನ  ಮಗನನ್ನು ಕರೆದುಕೊಂಡು ಹೋಗ್ತಿದ್ದ ಮಗನ ಮುಂದೆನೇ ಹಲ್ಲೆ ಮಾಡ್ತಿದ್ದ.ಹೀಗೆ ಕಾರನ್ನ ಅಡ್ಡಗಟ್ಟಿ ಲಾಂಗ್ ತೋರಿಸಿ ಹಲ್ಲೆ ಮಾಡಿ ಎಸ್ಕೇಪ್ ‌ಆಗಿ ಹೊರಮಾವು ಬ್ರಿಡ್ಜ್ ಬಳಿ ಬಾರ್ ಬಳಿ ನಿಂತು ಮದ್ಯಸೇವನೆ ಮಾಡುತ್ತಿದ್ದ ಆರೋಪಿಯ ಗ್ಯಾಂಗನ್ನು ಘಟನೆ ನಡೆದ 20 ನಿಮಿಷದಲ್ಲೇ ಡಿಕೆ ಹಳ್ಳಿ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವ ತಂಡ ಕಾರ್ಯಚರಣೆ ಮಾಡಿ ಬಂಧಿಸಿದ್ದಾರೆ. ಇನ್ನು ಸಿಸಿಬಿ ಸೇರಿದಂತೆ ಹೆಚ್ಚು ಠಾಣೆಗಳಲ್ಲಿ ಮನ್ಸೂರ್ ವಿರುದ್ಧ ಕೇಸ್ ದಾಖಲಾಗಿದೆ

ಶಿವಾಜಿನಗರ ಠಾಣೆ ಸೇರಿದಂತೆ ಹಲವು ಸ್ಟೇಷನ್ ಗಳಲ್ಲಿ ಇತನ ವಿರುದ್ಧ ಕೊಲೆ, ದರೋಡೆ ಸೇರಿದಂತೆ ೨೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರತಿಸಾರಿ ಜೈಲಿಗೆ ಹೋಗಿ ಬಂದಾಗಲೂ ಬದಲಾವಣೆ ಆಗದ‌ ಅಸಾಮಿ ಕ್ರೈಂ ಕಹಾನಿಗಳನ್ನ ಜಾಸ್ತಿ ಯೇ ಮಾಡುತ್ತಿದ್ದ .ಇನ್ನಾದ್ರು ಮನಪರಿವರ್ತನೆ ಆಗಿ ಬದಲಾಗ್ತಾನಾ.ಕಾಲವೇ ಉತ್ತರ ಹೇಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕನ್ನಡ ಬಾವುಟ ಸುಟ್ಟ ಪ್ರಕರಣ ಕ್ಕೆ ಟ್ವಿಸ್ಟ್..!