Publish Date: Wed, 07 Dec 2022 (14:40 IST)
Updated Date: Wed, 07 Dec 2022 (14:16 IST)
ಮಂಡ್ಯ : ಇಂದು ಅಥವಾ ನಾಳೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದ್ದು, ಐದಾರು ದಿನ ತಡವಾಗಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಜನರ ಕ್ಷಮೆ ಕೋರಿದ್ದಾರೆ.
ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಆದ್ರೆ ಐದಾರು ದಿನ ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ.
ಎಕ್ಸ್ ಪೆಂಕ್ಷನ್ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ್ರೆ ಮೈ-ಬೆಂ ಸಂಚರಿಸುವವರಿಗೆ ಕನಿಷ್ಠ 15-20 ನಿಮಿಷ ಉಳಿಯುತ್ತೆ ಎಂದು ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ ಮೂಲಕ ಮಾಹಿತಿ ನೀಡಿದ್ದಾರೆ.